ಶಿಖರ್ ಧವನ್ ವಿಶ್ವಕಪ್ ನಿಂದ ಹೊರಬಿದ್ದಿದ್ದನ್ನೇ ಜೋಕ್ ಮಾಡಿಕೊಂಡ ಟ್ವಿಟರಿಗರು

Webdunia
ಬುಧವಾರ, 12 ಜೂನ್ 2019 (09:01 IST)
ಲಂಡನ್: ಶಿಖರ್ ಧವನ್ ಗಾಯದ ಕಾರಣದಿಂದ ವಿಶ್ವಕಪ್ ನಿಂದ ಹೊರಬಿದ್ದ ಸುದ್ದಿ ತಿಳಿಯುತ್ತಿದ್ದಂತೇ ಅಭಿಮಾನಿಗಳು ಶಾಕ್ ಆಗಬಹುದು ಎಂದುಕೊಂಡರೆ ಟ್ವಿಟರ್ ನಲ್ಲಿ ಇದನ್ನೇ ತಮಾಷೆ ಮಾಡಲು ವೇದಿಕೆಯಾಗಿ ಬಳಸಿಕೊಂಡಿದ್ದಾರೆ.


ಧವನ್ ಸ್ಥಾನಕ್ಕೆ ಯಾರು ಟೀಂ ಇಂಡಿಯಾಗೆ ಆಯ್ಕೆಯಾಗಬಹುದು ಎಂಬ ವಿಚಾರವನ್ನೇ ಇಟ್ಟುಕೊಂಡು ಟ್ವಿಟರಿಗರು ಮೆಮೆ ಮೂಲಕ ತಮಾಷೆ ಮಾಡುತ್ತಿದ್ದಾರೆ.

ಲಗಾನ್ ಸಿನಿಮಾದಲ್ಲಿ ಅಮೀರ್ ಖಾನ್ ತನ್ನ ಸಂಗಡಿಗರೊಂದಿಗೆ ಕುತೂಹಲದಿಂದ ನೋಡುತ್ತಿರುವ ಫೋಟೋ ಹಾಕಿ ಈಗ ಬಿಸಿಸಿಐ ಕಚೇರಿ ಹೊರಗಡೆ ಮನೀಶ್ ಪಾಂಡೆ, ರಿಷಬ್ ಪಂತ್ ಹೀಗೆ ಕಾಯ್ತಿರಬಹುದು ಎಂದು ತಮಾಷೆ ಮಾಡಿದ್ದಾರೆ.

ಮತ್ತೆ ಕೆಲವರು ಸರತಿ ಸಾಲಿನಲ್ಲಿ ಕ್ರಿಕೆಟಿಗರು ನಿಂತಿರುವ ಫೋಟೋ ಹಾಕಿ ಧವನ್ ಸ್ಥಾನಕ್ಕೆ ತಾವು ಆಯ್ಕೆಯಾಗಬಹುದು ಎಂದು ಕಾಯ್ತಿರುವ ಆಟಗಾರರನ್ನು ನೋಡಿ ಎಂದು ಲೇವಡಿ ಮಾಡಿದ್ದಾರೆ. ಮತ್ತೆ ಕೆಲವರು ಹೇಗಿದ್ದರೂ ಯುವರಾಜ್ ಸಿಂಗ್ ಗೆ ವಿದಾಯ ಪಂದ್ಯ ಆಡಬೇಕು ಎಂದು ಆಸೆಯಿತ್ತಲ್ವಾ? ಈಗಲೇ ಅವರನ್ನು ತಂಡಕ್ಕೆ ಕರೆಸಿ ಕೆಎಲ್ ರಾಹುಲ್ ರನ್ನು ಆರಂಭಿಕರಾಗಿ ಮಾಡಿ ಯುವಿಗೆ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಅವಕಾಶ ಕೊಡಬಹುದು ಎಂದು ತಮಾಷೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಎಲ್ಲರೂ ಫುಟ್ಬಾಲ್ ಫೈನಲ್ ನೋಡ್ತಿರುವಾಗ ಮೇಕೆ ಬಂದು ಹೀಗೆ ಮಾಡೋದಾ Video

IND vs ENG: ರೋಹಿತ್ ಶರ್ಮಾ ಔಟಾಗಿ ಹೋಗುತ್ತಿದ್ದಾಗ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ Video

FIFA WC: ಅರ್ಜೆಂಟೀನಾ ಗೆಲ್ಲುತ್ತೆ, ಸಂಭ್ರಮಾಚರಣೆ ಮಾಡಲು ಶಾಲೆಗಳಿಗೆ ರಜೆ ಕೊಟ್ಟಿದ್ದ ಕೇರಳ: ಆದ್ರೆ ಆಗಿದ್ದೇ ಬೇರೆ

FIFA World Cup: ಅರ್ಜೆಂಟೀನಾ ನಿರೀಕ್ಷೆಯೆಲ್ಲಾ ಭಗ್ನವಾಯ್ತು: ಸ್ಪೇನ್ ಹೊಸ ವಿಶ್ವಚಾಂಪಿಯನ್

ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯದ ಮಜಾ ಸವಿಯಲು ಶಾಲಾ ಕಾಲೇಜುಗಳಿಗೆ ರಜೆ ಸಾರಿದ ಕೇರಳ ಸರ್ಕಾರ

ಮುಂದಿನ ಸುದ್ದಿ
Show comments