ತುಳುನಾಡಿನ ಅಳಿಯ ಸೂರ್ಯಕುಮಾರ್‌ಗೆ ಹರ್ನಿಯಾ ನೋವು: ಚಿಕಿತ್ಸೆಗೆ ಇಂಗ್ಲೆಂಡ್‌ನತ್ತ ಸ್ಟಾರ್‌ ಕ್ರಿಕೆಟಿಗ

Sampriya
ಬುಧವಾರ, 18 ಜೂನ್ 2025 (17:33 IST)
Photo Credit X
ಮುಂಬೈ: ತುಳುನಾಡಿನ ಅಳಿಯ, ಭಾರತ ಟಿ20 ಕ್ರಿಕೆಟ್‌ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಅವರಿಗೆ ಹರ್ನಿಯಾ ನೋವು ಕಾಣಿಸಿಕೊಂಡಿದೆ. 

33 ವರ್ಷದ ಸ್ಟಾರ್‌ ಬ್ಯಾಟರ್‌ ಯಾದವ್‌ ಅವರು ಸ್ಪೋರ್ಟ್ಸ್ ಹರ್ನಿಯಾ (ಕಿಬೊಟ್ಟೆಯ ಸ್ನಾಯು ದುರ್ಬಲಗೊಳ್ಳುವುದು) ಸಂಬಂಧಿತ ನೋವಿನ ಚಿಕಿತ್ಸೆಗಾಗಿ ತಜ್ಞರನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. 

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಬಳಿಕ ಯಾದವ್‌ ಅವರು ಮುಂಬೈ ಟಿ20 ಲೀಗ್‌ ಆಡಿದ್ದಾರೆ. ಈ ಲೀಗ್‌ ಸಂದರ್ಭದಲ್ಲಿ ಸೂರ್ಯ ಅವರಲ್ಲಿ ನೋವು ಉಲ್ಬಣಿಸಿತ್ತೇ ಎಂಬುದು ತಿಳಿದು ಬಂದಿಲ್ಲ. ಕಳೆದ ಮೂರು ತಿಂಗಳಿಂದ ನೋವಿನ ಅರಿವಿಲ್ಲದೆ ಸಕ್ರಿಯ ಕ್ರಿಕೆಟ್‌ನಲ್ಲಿ ನಿರತರಾಗಿದ್ದರು.

2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಸೂರ್ಯಕುಮಾರ್ ಯಾದವ್, 700ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಗಮನಾರ್ಹ ಪ್ರದರ್ಶನ ನೀಡಿದ್ದರು.

ಸೂರ್ಯಕುಮಾರ್ ಯಾದವ್ ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಆಗಸ್ಟ್-ಸೆಪ್ಟೆಂಬರ್ ಅವಧಿಗೂ ಮುನ್ನ ಟಿ20 ಕ್ರಿಕೆಟ್ ಇಲ್ಲದ ಕಾರಣ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಸೂರ್ಯಕುಮಾರ್ ಗುಣಮುಖರಾಗಲು ಬೇಕಾದಷ್ಟು ಸಮಯ ಸಿಗಲಿದೆ ಎನ್ನಲಾಗಿದೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂದಾನ ಶೀಘ್ರದಲ್ಲೇ ಹಣೆಮಣೆಗೆ: ಇಂದೋರ್‌ನ ಸೊಸೆ ಎಂದಿದ್ಯಾರು ಗೊತ್ತಾ

Womens World Cup: ಭಾರತದ ವನಿತೆಯರಿಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ

AUS vs IND ODI: ರೋಹಿತ್, ವಿರಾಟ್, ಶುಭಮನ್‌ ಪೆವಿಲಿಯನ್‌ ಪರೇಡ್‌: ಭಾರತಕ್ಕೆ ಆರಂಭಿಕ ಆಘಾತ

ಟೀಂ ಇಂಡಿಯಾಗೆ ಮರಳಿದ ಕಿಂಗ್‌ ಕೊಹ್ಲಿ, ಸಹ ಆಟಗಾರರ ಜತೆಗಿನ ವಿರಾಟ್ ಕ್ಷಣ ನೋಡುವುದೇ ಖುಷಿ

ಕೊಹ್ಲಿಯಿಂದ ಬ್ಯಾಟಿಂಗ್ ಟಿಪ್ಸ್, ರೋಹಿತ್ ರಿಂದ ಕ್ಯಾಪ್ಟನ್ಸಿ ಟಿಪ್ಸ್: ಶುಭಮನ್ ಗಿಲ್ ಬಲು ಜಾಣ

ಮುಂದಿನ ಸುದ್ದಿ
Show comments