Select Your Language

Notifications

webdunia
webdunia
webdunia
webdunia

ಮೂರು ಬೌಲರ್ ಗಳು ಮೂರು ವಿಕೆಟ್: ಯಾರಿಗುಂಟು ಯಾರಿಗಿಲ್ಲ?

ಮೂರು ಬೌಲರ್ ಗಳು ಮೂರು ವಿಕೆಟ್: ಯಾರಿಗುಂಟು ಯಾರಿಗಿಲ್ಲ?
Mohali , ಮಂಗಳವಾರ, 29 ನವೆಂಬರ್ 2016 (11:54 IST)
ಮೊಹಾಲಿ: ಟೀಂ ಇಂಡಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಊಟದ ವಿರಾಮದ ವೇಳೆಗೆ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದೆ. ಭಾರತದ ಮೂವರು ಬೌಲರ್ ಗಳು ಐದು ವಿಕೆಟ್ ಗೊಂಚಲಿನ ಸನಿಹದಲ್ಲಿದ್ದಾರೆ. ಇಂಗ್ಲೆಂಡ್ ನ ಮೂರು ವಿಕೆಟ್ ಕೀಳಬೇಕಾಗಿದೆ. ಯಾರಿಗುಂಟು ಯಾರಿಗಿಲ್ಲ?

ಐದು ವಿಕೆಟ್ ಗಳ ರೇಸ್ ನಲ್ಲಿರುವವರು ಜಯಂತ್ ಯಾದವ್, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್. ಬ್ಯಾಟಿಂಗ್ ನಲ್ಲೂ ಇವರೇ ಭಾರತದ ಪರ ಕೆಳ ಕ್ರಮಾಂಕದಲ್ಲಿ ಅರ್ಧಶತಕ ಬಾರಿಸಿ ದಾಖಲೆ ಮಾಡಿದವರು. ಈಗ ಐದು ವಿಕೆಟ್ ಕೀಳುವ ಅದೃಷ್ಟ ಯಾರಿಗಿದೆ ನೋಡಬೇಕು.

ಇವರಲ್ಲಿ ಹೆಚ್ಚು ಅವಕಾಶವಿರುವುದು ಅಶ್ವಿನ್ ಗೆ. ಇನ್ನು ಎರಡು ವಿಕೆಟ್ ಕಿತ್ತರೆ ಅಶ್ವಿನ್ ಆ ಸಾಧನೆ ಮಾಡಬಹುದು. ಆದರೆ ಜಡೇಜಾ ಮತ್ತು ಯಾದವ್ ಗೆ ಇನ್ನೂ ಮೂರು ವಿಕೆಟ್ ಬೇಕಾಗಿರುವುದರಿಂದ ಇದು ಅಸಾಧ್ಯವೇ. ಇಂಗ್ಲೆಂಡ್ ಈಗ ಕೇವಲ 22 ರನ್ ಮುನ್ನಡೆಯಲ್ಲಿದೆ. ಒಂದು ವೇಳೆ ಊಟವಾದ ಮೇಲೆ ಆದಷ್ಟು ಬೇಗ ಆಲೌಟ್ ಆಗಿ 100 ರನ್ ಒಳಗೆ ಗೆಲುವಿನ ಗುರಿ ನೀಡಿದರೆ, ಭಾರತ ಇಂದೇ ಗೆದ್ದರೆ, ಮತ್ತೆ ತೀರ್ಪುಗಾರರಿಗೆ ಹೊಸ ತಲೆನೋವು ಶುರುವಾಗುತ್ತದೆ. ಈ ಮೂವರಲ್ಲಿ ಪಂದ್ಯ ಪುರುಷ ಪ್ರಶಸ್ತಿ ಕೊಡಲು ಯಾರು ಹಿತವರು?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಪಂದ್ಯಗಳ ವೇಳಾಪಟ್ಟಿ ಬದಲಾವಣೆಯಾಗಿಲ್ಲ ಎನ್ನುತ್ತಿದ್ದಾರೆ ಸೌರವ್ ಗಂಗೂಲಿ