ಐಪಿಎಲ್: ಹೈದರಾಬಾದ್ ಗೆ ಶಿಖರ್ ಧವನ್ ನಾಯಕರಾದರೆ ವಿರಾಟ್ ಕೊಹ್ಲಿಗೆ ಸಿಗಲಿದೆ ಈ ಹೆಗ್ಗಳಿಕೆ!

Webdunia
ಗುರುವಾರ, 29 ಮಾರ್ಚ್ 2018 (09:53 IST)
ಮುಂಬೈ: ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಒಟ್ಟು ಐದು ತಂಡಗಳಿಗೆ ಭಾರತೀಯರೇ ನಾಯಕರಾಗಿದ್ದಾರೆ. ಉಳಿದೊಂದು ತಂಡ ಹೈದರಾಬಾದ್ ಗೂ ಭಾರತೀಯ ಆಟಗಾರನೇ ನಾಯಕನಾಗುವ ಸಂಭವ ಕಂಡುಬರುತ್ತಿದೆ. ಹೀಗಾದರೆ ಟೀಂ ಇಂಡಿಯಾ ನಾಯಕ ಹಾಗೂ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅದೇನದು?

ಈಗಾಗಲೇ ರಾಜಸ್ಥಾನ್ ರಾಯಲ್ಸ್ ನಾಯಕತ್ವ ತ್ಯಜಿಸಿದ ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ ಬದಲಿಗೆ ಟೀಂ ಇಂಡಿಯಾದ  ಅಜಿಂಕ್ಯಾ ರೆಹಾನೆ ನಾಯಕರಾಗಿದ್ದಾರೆ. ಹೈದರಾಬಾದ್ ತಂಡಕ್ಕೆ ಮಾತ್ರ ಡೇವಿಡ್ ವಾರ್ನರ್ ರೂಪದಲ್ಲಿ ವಿದೇಶೀ ಮೂಲದ ನಾಯಕರಿದ್ದರು. ಆದರೆ ಅವರೂ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಈ ಸ್ಥಾನಕ್ಕೆ ಟೀ ಇಂಡಿಯಾ ಆರಂಭಿಕ ಶಿಖರ್ ಧವನ್ ನಾಯಕರಾಗುವುದು ಬಹುತೇಕ ಖಚಿತವಾಗಿದೆ.

ಇದು ನಿಜವೇ ಆದರೆ ಎಲ್ಲಾ ಐಪಿಎಲ್ ತಂಡಕ್ಕೂ ಇದೇ ಮೊದಲ ಬಾರಿಗೆ ಭಾರತೀಯರೇ ನಾಯಕರಾಗಲಿದ್ದಾರೆ. ಅಷ್ಟೇ ಅಲ್ಲ, ಟೀಂ ಇಂಡಿಯಾ ಪರ ತಮ್ಮ ನಾಯಕತ್ವದಲ್ಲಿ ಆಡುವ ಆಟಗಾರರೇ ವಿರಾಟ್ ಕೊಹ್ಲಿಗೆ ಎದುರಾಳಿ ನಾಯಕರಾಗಿ ಲಭ್ಯವಾಗಲಿದ್ದಾರೆ. ಇದೊಂಥರಾ ಆರ್ ಸಿಬಿಗೆ ಹೆಗ್ಗಳಿಕೆಯಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಥೇಟ್ ಬ್ರೆಟ್ ಲೀಯಂತೇ ಬೌಲಿಂಗ್ ಮಾಡ್ತಾನೆ ಈ ಪೋರ: ವಿಡಿಯೋ ನೋಡಿ

ಟಿ20 ವಿಶ್ವಕಪ್ ಯಾರು ನೋಡ್ತಾರೆ... ಆರ್ ಅಶ್ವಿನ್ ಹೀಗೆ ಬೇಸರಪಟ್ಟಿದ್ದು ಯಾಕೆ

2027 ರ ಏಕದಿನ ವಿಶ್ವಕಪ್ ಗೆ ಟೀಂ ಇಂಡಿಯಾ ಬ್ಲೂ ಪ್ರಿಂಟ್ ರೆಡಿ: ಗಂಭೀರ್ ಪ್ಲ್ಯಾನ್ ನಲ್ಲಿ ಯಾರೆಲ್ಲಾ ಇದ್ದಾರೆ

ಮದುವೆ ಬ್ರೇಕಪ್ ಬಳಿಕ ಸ್ಮೃತಿ ಮಂಧಾನ ವರ್ತನೆಯೇ ಬದಲಾಯ್ತು Video

ಸಚಿನ್ ತೆಂಡೂಲ್ಕರ್‌ ಪುತ್ರಿ ಸಾರಾ ತೆಂಡೂಲ್ಕರ್ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ

ಮುಂದಿನ ಸುದ್ದಿ
Show comments