Webdunia - Bharat's app for daily news and videos

Install App

ವಿರಾಟ್ ಕೊಹ್ಲಿ ಎಲ್ಲರ ಫೆವರಿಟ್ ಎನ್ನುವುದಕ್ಕೆ ಈ ವಿಡಿಯೋ ಸಾಕು

Sampriya
ಮಂಗಳವಾರ, 8 ಏಪ್ರಿಲ್ 2025 (16:43 IST)
Photo Courtesy X
2025 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಂಗಳವಾರದ ಪಂದ್ಯಾಟದಲ್ಲಿ ಮುಂಬೈ ಇಂಡಿಯನ್ಸ್‌ ಅನ್ನು ಬೆಂಗಳೂರು ಚಾಲೆಂಜರ್ಸ್‌ ತಮ್ಮ ಅದ್ಭುತ ಪ್ರದರ್ಶನದಿಂದ ಮಣಿಸಿದರು. ಪಂದ್ಯಾಟದ ಬಳಿಕ ಮುಂಬೈ ಇಂಡಿಯನ್ಸ್‌ನ ಯುವ ಆಟಗಾರರು ಕಿಂಗ್‌ ಕೊಹ್ಲಿ ಜತೆ ಫೋಟೋ ತೆಗೆಸಿಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎದುರಾಳಿಯಾಗಿದ್ದರು, ಕಿಂಗ್ ಕೊಹ್ಲಿ ಎಲ್ಲರ ಫೇವರೆಟ್ ಎಂದು ವಿಡಿಯೋವನ್ನು ವೈರಲ್ ಮಾಡಲಾಗುತ್ತಿದೆ.

ಪಂದ್ಯದ ನಂತರ ವಿರಾಟ್ ಕೊಹ್ಲಿ ತಮ್ಮ ಫೋನ್ ನೋಡುತ್ತಿದ್ದರು. ಅಲ್ಲಿಗೆ ಬಂದ ಮುಂಬೈನ ಯುವ ಆಟಗಾರರು ಫೋಟೋ ಕೇಳಿದರು. ಅದಕ್ಕೆ ಸಂತೋಷದಿಂದ ಒ‍ಪ್ಪಿದ ವಿರಾಟ್‌ ನಗುವಿನೊಂದಿಗೆ
ಫೋಟೋ ನೀಡಿದರು.  ಮುಂಬೈ ತಂಡದ ರಾಜ್ ಬಾವಾ, ಅಶ್ವನಿ ಕುಮಾರ್ ಮತ್ತು ಸತ್ಯನಾರಾಯಣ ರಾಜು ಅನುಭವಿ ಮುಂಬೈ ಆಟಗಾರರೊಂದಿಗೆ ಪೋಸ್ ನೀಡಿದರೆ, ರಾಬಿನ್ ಮಿಂಜ್ ಆ ಕ್ಷಣವನ್ನು ಫೋಟೋಗಳಲ್ಲಿ ಸೆರೆಹಿಡಿದರು.

ಐಪಿಎಲ್‌ 2025ರ 18ನೇ ಆವೃತ್ತಿಯನ್ನು ಆರ್‌ಸಿಬಿ ಗೆಲುವಿನ ಖಾತೆಯೊಂದಿಗೆ ತೆರೆದಿದೆ. ಇದುವರೆಗೂ ನಡೆದ ನಾಲ್ಕು ಪಂದ್ಯಾಟದಲ್ಲಿ ಮೂರರಲ್ಲಿ ಗೆದ್ದು ಟೇಬಲ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದೀಗ ಹ್ಯಾಟ್ರಿಕ್ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್‌ ಎಂಟನೇ ಸ್ಥಾನದಲ್ಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Norway Chess: ಮ್ಯಾಗ್ನಸ್ ಕಾರ್ಲ್‌ಸನ್ ಏಳನೇ ಬಾರಿ ಕಿರೀಟ: ಪ್ರಶಸ್ತಿ ರೇಸ್‌ನಲ್ಲಿದ್ದ ಗುಕೇಶ್‌ಗೆ ನಿರಾಸೆ

Chinnaswamy Stampede: ಕಾಲ್ತುಳಿತಕ್ಕೆ ಮತ್ತಷ್ಟು ವಿಕೆಟ್‌ ಪತನ: ಕೆಎಸ್‌ಸಿಎ ಪದಾಧಿಕಾರಿಗಳು ಗುಡ್‌ಬೈ

Virat Kohli: ನೀವೇ ಕರೆಸಿ ಜಾತ್ರೆ ಮಾಡಿ ಈಗ ವಿರಾಟ್ ಕೊಹ್ಲಿ ಮೇಲೆ ಯಾಕೆ ಕೇಸ್ ಹಾಕ್ತೀರಿ

Vijay Mallya: ನಾನೇನಾದ್ರೂ ಆರ್ ಸಿಬಿಯಲ್ಲಿ ಇದ್ದಿದ್ರೆ ಕೆಎಲ್ ರಾಹುಲ್..: ವಿಜಯ್ ಮಲ್ಯ ಸ್ಪೋಟಕ ಹೇಳಿಕೆ

Arrest Kohli: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿ ಹ್ಯಾಶ್‌ಟ್ಯಾಗ್‌

ಮುಂದಿನ ಸುದ್ದಿ
Show comments