ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ವಿರುದ್ಧ ನೀಡಿದ ತೀರ್ಪು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
57 ರನ್ ಗಳಿಸಿದ್ದಾಗ ಸೂರ್ಯಕುಮಾರ್ ಯಾದವ್ ಹೊಡೆದ ಚೆಂಡು ನೇರವಾಗಿ ಇಂಗ್ಲೆಂಡ್ ಫೀಲ್ಡರ್ ಡೇವಿಡ್ ಮಲನ್ ಕೈ ಸೇರಿತ್ತು. ಆದರೆ ಮಲನ್ ಈ ಕ್ಯಾಚ್ ಪಡೆಯುವಾಗ ಬಾಲ್ ಕೊಂಚ ನೆಲ ಸವರಿತ್ತು. ಇದನ್ನು ಹಲವು ಆಂಗಲ್ ಗಳಲ್ಲಿ ನೋಡಿದ ಥರ್ಡ್ ಅಂಪಾಯರ್ ಕೊನೆಗೆ ಔಟ್ ತೀರ್ಪು ನೀಡಿದರು. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡಾ ಅಂಪಾಯರ್ ಕಳಪೆ ತೀರ್ಪನ್ನು ಟೀಕಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಕೂಡಾ ಪಂದ್ಯದ ಬಳಿಕ ಈ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಿಪ್ಲೇನಲ್ಲಿ ಚೆಂಡು ನೆಲಕ್ಕೆ ತಾಕಿರುವುದು ಸ್ಪಷ್ಟವಾದರೂ ಅಂಪಾಯರ್ ಈ ರೀತಿ ಉತ್ತಮವಾಗಿ ಆಡುತ್ತಿದ್ದ ಸೂರ್ಯಕುಮಾರ್ ಯಾದವ್ ಇನಿಂಗ್ಸ್ ನ್ನು ಕೊನೆಗೊಳಿಸುರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.