Select Your Language

Notifications

webdunia
webdunia
webdunia
webdunia

ಟೆಸ್ಟ್ ಕ್ರಿಕೆಟ್: ಆಸ್ಟ್ರೇಲಿಯಾ ಎದುರು ಗೆದ್ದ ದ.ಆಫ್ರಿಕಾ

ಟೆಸ್ಟ್ ಕ್ರಿಕೆಟ್: ಆಸ್ಟ್ರೇಲಿಯಾ ಎದುರು ಗೆದ್ದ ದ.ಆಫ್ರಿಕಾ
Perth , ಸೋಮವಾರ, 7 ನವೆಂಬರ್ 2016 (13:19 IST)
ಪರ್ತ್: ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ದ.ಆಫ್ರಿಕಾ 177 ರನ್ ಗಳಿಂದ ಗೆದ್ದು ಸರಣಿಯಲ್ಲಿ ಮುನ್ನಡೆ ಪಡೆದಿದೆ.

ಗೆಲ್ಲಲು 539 ರನ್ ಗಳ ಕಠಿಣ ಸವಾಲು ಒಡ್ಡಿದ್ದ ಆಫ್ರಿಕಾ, ಅತಿಥೇಯ ತಂಡವನ್ನು ಕೇವಲ 361 ರನ್ ಗಳಿಗೆ ಆಲೌಟ್ ಮಾಡಿತು. ಮೊದಲ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 244 ರನ್ ಗಳಿಸಿದ್ದರೆ, ದ.ಆಫ್ರಿಕಾ 242 ಕ್ಕೆ ಆಲೌಟ್ ಆಗಿತ್ತು.

ಆದರೆ ದ್ವಿತೀಯ ಇನಿಂಗ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಆಫ್ರಿಕಾ ಬ್ಯಾಟ್ಸ್ ಮನ್ ಗಳು  540 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದ್ದರು. ಆಫ್ರಿಕಾ ಪರ ದ್ವಿತೀಯ ಇನಿಂಗ್ಸ್ ನಲ್ಲಿ ಜೆಪಿ ಡುಮಿನಿ ಮತ್ತು ಡೀನ್ ಎಗ್ಲರ್ ಶತಕ ಗಳಿಸಿದ್ದರು.

ಆಸ್ಟ್ರೇಲಿಯಾ ಪರ ದ್ವಿತೀಯ ಇನಿಂಗ್ಸ್ ನಲ್ಲಿ ಉಸ್ಮಾನ್ ಖ್ವಾಜಾ ಮೂರೇ ರನ್ನುಗಳಿಗೆ ಶತಕ ತಪ್ಪಿಸಿಕೊಂಡರು. ಆಫ್ರಿಕಾ ಪರ ಕೆ. ರಬಡಾ ಮಾರಕ ದಾಳಿ ಸಂಘಟಿಸಿ 5 ವಿಕೆಟ್ ಕಿತ್ತರು.  ಇದರೊಂದಿಗೆ ಪರ್ತ್ ಮೈದಾನದಲ್ಲಿ ದ.ಆಫ್ರಿಕಾ ತನ್ನ ಮತ್ತೊಂದು ಗೆಲುವು ದಾಖಲಿಸಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಟೆಸ್ಟ್: 100 ನೇ ಪಂದ್ಯ ಆಡಲಿರುವ ಸ್ಟುವರ್ಟ್ ಬ್ರಾಡ್