Select Your Language

Notifications

webdunia
webdunia
webdunia
webdunia

ಭಾರತ-ಇಂಗ್ಲೆಂಡ್ ಟೆಸ್ಟ್: 100 ನೇ ಪಂದ್ಯ ಆಡಲಿರುವ ಸ್ಟುವರ್ಟ್ ಬ್ರಾಡ್

ಭಾರತ-ಇಂಗ್ಲೆಂಡ್ ಟೆಸ್ಟ್: 100 ನೇ ಪಂದ್ಯ ಆಡಲಿರುವ ಸ್ಟುವರ್ಟ್ ಬ್ರಾಡ್
Rajkot , ಸೋಮವಾರ, 7 ನವೆಂಬರ್ 2016 (13:03 IST)
ರಾಜಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವೆ ರಾಜಕೋಟ್ ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಪ್ರವಾಸಿ  ತಂಡದ ಪ್ರಮುಖ ವೇಗಿ ಸ್ಟುವರ್ಟ್ ಬ್ರಾಡ್ ಗೆ 100 ನೇ ಟೆಸ್ಟ್ ಪಂದ್ಯವಾಗಲಿದೆ.

ಈ ಮೂಲಕ 100 ನೇ ಟೆಸ್ಟ್ ಪಂದ್ಯ ಆಡುತ್ತಿರುವ 14 ನೇ ಇಂಗ್ಲೆಂಡ್ ಆಟಗಾರ ಎನ್ನುವ ಗೌರವಕ್ಕೆ ಅವರು ಪಾತ್ರರಾಗಲಿದ್ದಾರೆ. ಮಾಜಿ ಆಟಗಾರ ಕ್ರಿಸ್ ಬ್ರಾಡ್ ಅವರ ಪುತ್ರರಾಗಿರುವ ಸ್ಟುವರ್ಟ್ ಇಂಗ್ಲೆಂಡ್ ತಂಡದ ಪ್ರಮುಖ ಬೌಲರ್ ಆಗಿದ್ದಾರೆ.

ಭಾರತದ ವಿರುದ್ಧ ಅವರ ದಾಖಲೆ ಚೆನ್ನಾಗಿದೆ. ಹೀಗಾಗಿ 100 ನೇ ಪಂದ್ಯವನ್ನು ಸ್ಮರಣೀಯವಾಗಿಸುವಂತಹ ದಾಳಿ ಸಂಘಟಿಸುತ್ತಾರಾ ಕಾದು ನೋಡಬೇಕು. ಇದೇ ಬ್ರಾಡ್ ಬೌಲಿಂಗ್ ನಲ್ಲಿ ಯುವರಾಜ್ ಸಿಂಗ್ ಆರು ಸಿಕ್ಸರ್ ಸಿಡಿಸಿದ್ದು ಎನ್ನುವುದನ್ನೂ ಮರೆಯುವಂತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಿಂಬಾಬ್ವೆ ಏಕದಿನ ಸರಣಿಗೆ ಶ್ರೀಲಂಕಾ ತಂಡಕ್ಕೆ ಉಪುಲ್ ತರಂಗಾ ನಾಯಕತ್ವ