Select Your Language

Notifications

webdunia
webdunia
webdunia
webdunia

ಕಿರು ಮಾದರಿ ಕ್ರಿಕೆಟ್ ಸರಣಿಗೆ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ!

ಕಿರು ಮಾದರಿ ಕ್ರಿಕೆಟ್ ಸರಣಿಗೆ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ!
NewDelhi , ಮಂಗಳವಾರ, 24 ಜನವರಿ 2017 (10:03 IST)
ನವದೆಹಲಿ: ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ! ಅರೇ. ಅದು ಹೇಗೆ ಸಾಧ್ಯ? ಉರಿ ದಾಳಿ ನಂತರ ಪಾಕ್ ನೊಂದಿಗೆ ಕ್ರಿಕೆಟ್ ಸಾಧ್ಯವೇ ಇಲ್ಲ ಎಂದು ಭಾರತ ಪಟ್ಟು ಹಿಡಿದು ಕೂತಿರುವಾಗ, ವಿಶ್ವದ ಯಾವುದೇ ಕ್ರಿಕೆಟ್ ರಾಷ್ಟ್ರಗಳು ಭದ್ರತೆ ನೆಪದಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕುತ್ತಿರುವಾಗ ಇದು ಹೇಗೆ ಸಾಧ್ಯವಾಯಿತು ಎಂದು ನೀವಂದುಕೊಳ್ಳುತ್ತಿರಬಹುದು.
 

ಆದರೂ ಅದು ನಿಜ. ಆದರೆ ಪ್ರವಾಸ ಕೈಗೊಳ್ಳುತ್ತಿರುವುದು ಭಾರತ ಅಂಧರ ಕ್ರಿಕೆಟ್ ತಂಡ.  ಇದೇ ತಿಂಗಳ ಅಂತ್ಯಕ್ಕೆ ಭಾರತದಲ್ಲಿ ಅಂಧರ ಕ್ರಿಕೆಟ್ ವಿಶ್ವಕಪ್ ನಡೆಯಲಿದೆ. ಅದಾದ ಬಳಿಕ ಭಾರತ ತಂಡ ಪಾಕ್ ಪ್ರವಾಸ ಕೈಗೊಳ್ಳುವ ಕುರಿತು ದಿನಾಂಕ ನಿಗದಿ ಮಾಡುವುದಾಗಿ ಪಾಕ್ ಅಂಧರ ಕ್ರಿಕೆಟ್ ಮಂಡಳಿ ತಿಳಿಸಿದೆ.

ಎರಡನೇ ಅಂಧರ ವಿಶ್ವಕಪ್ ಕ್ರಿಕೆಟ್ ಗೆ ರಾಹುಲ್ ದ್ರಾವಿಡ್ ರಾಯಭಾರಿಯಾಗಿದ್ದಾರೆ. ಈ ವಿಶ್ವಕಪ್ ಕ್ರಿಕೆಟ್ ಗೆ ಪಾಕಿಸ್ತಾನ ಭಾರತ ಪ್ರವಾಸ ಕೈಗೊಳ್ಳುತ್ತಿದೆ. ಪಾಕಿಸ್ತಾನವಲ್ಲದೆ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಸೇರಿದಂತೆ ವಿಶ್ವದ ಪ್ರಮುಖ ಕ್ರಿಕೆಟ್ ಆಡುವ ರಾಷ್ಟ್ರಗಳ ಅಂಧರ ತಂಡ ಈ ಮೆಗಾ ಕೂಟದಲ್ಲಿ ಭಾಗವಹಿಸಲಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಾದರೂ ಬಿಸಿಸಿಐಗೆ ಹೊಸ ಬಾಸ್ ಬರ್ತಾರಾ?