Select Your Language

Notifications

webdunia
webdunia
webdunia
webdunia

ದುರ್ಬಲರ ಮೇಲೆ ಟೀಂ ಇಂಡಿಯಾ ಕ್ರಿಕೆಟಿಗರ ಸವಾರಿ

ದುರ್ಬಲರ ಮೇಲೆ ಟೀಂ ಇಂಡಿಯಾ ಕ್ರಿಕೆಟಿಗರ ಸವಾರಿ
ಪೋರ್ಟ್ ಆಫ್ ಸ್ಪೇನ್ , ಸೋಮವಾರ, 26 ಜೂನ್ 2017 (08:21 IST)
ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ 105 ರನ್ ಗಳಿಂದ ಗೆಲುವು ದಾಖಲಿಸಿದೆ.

 
ಮಳೆಗೆ ಪಂದ್ಯ ನಡೆಯುವುದೇ ಅನುಮಾನ ಎಂಬ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕೊನೆಗೂ ವರುಣ ದಯಪಾಲಿಸಿದ ಕಾರಣ 43 ಓವರ್ ಗಳಿಗೆ ಪಂದ್ಯ ಕಡಿತಗೊಳಿಸಲಾಯಿತು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ವೆಸ್ಟ್ ಇಂಡೀಸ್ ಭಾರತೀಯ ಬ್ಯಾಟ್ಸ್ ಮನ್ ಗಳಿಗೆ ದಾರಾಳಿಗಳಾದರು.

ಆರಂಭಿಕ ಜೋಡಿ ಅದ್ಭುತ ಜತೆಯಾಟವಾಡಿತು. ಅಜಿಂಕ್ಯ ರೆಹಾನೆ ಶತಕ ದಾಖಲಿಸಿದರೆ, ಇನ್ನೊಬ್ಬ ಆರಂಭಿಕ ಶಿಖರ್ ಧವನ್ ಅರ್ಧಶತಕ ಗಳಿಸಿದರು. ನಾಯಕ ವಿರಾಟ್ ಕೊಹ್ಲಿ 87 ರನ್ ಸಿಡಿಸಿ ಮಿಂಚಿದರು. ಅಂತಿಮವಾಗಿ ಭಾರತ 5 ವಿಕೆಟ್ ನಷ್ಟಕ್ಕೆ 310 ರನ್ ಪೇರಿಸಿತು.

ಈ ಮೊತ್ತ ಬೆನ್ನತ್ತಿದ ವಿಂಡೀಸ್ 6 ವಿಕೆಟ್ ಕಳೆದುಕೊಂಡು 205 ರನ್ ಗಳಿಸಷ್ಟೇ ಶಕ್ತವಾಯಿತು. ಚೊಚ್ಚಲ ಏಕದಿನ ಪಂದ್ಯವಾಡಿದ ಕುಲದೀಪ್ ಯಾದವ್ ಮೂರು ವಿಕೆಟ್ ಕಿತ್ತು ಮಿಂಚಿದರು. ಶತಕ ಗಳಿಸಿ ರೆಹಾನೆ ಪಂದ್ಯ ಪುರುಷರಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜೈಪುರ ಪೊಲೀಸರ ನಂತರ ಇದೀಗ ಪಾಕ್ ಪೊಲೀಸರಿಂದ ಜಸ್ಪ್ರೀತ್ ಬುಮ್ರಾ ನೋ ಬಾಲ್ ಬಳಕೆ