Webdunia - Bharat's app for daily news and videos

Install App

ವಿಶ್ವಕಪ್ ನಲ್ಲಿ ಕೋಚ್ ದ್ರಾವಿಡ್ ಸಹಾಯಕ್ಕೆ ಲೆಕ್ಕದ ಮೇಸ್ಟ್ರು, ಬಸ್ ಡ್ರೈವರ್, ಇಂಜಿನಿಯರ್ ಗಳಿದ್ದರು!

Webdunia
ಬುಧವಾರ, 22 ನವೆಂಬರ್ 2023 (11:43 IST)
Photo Courtesy: Twitter
ಮುಂಬೈ: 2023 ರ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಟೀಂ ಇಂಡಿಯಾ ಸೋತಿರಬಹುದು. ಆದರೆ ಸೆಮಿಫೈನಲ್ ವರೆಗೆ ಟೀಂ ಇಂಡಿಯಾ ಯಶಸ್ವೀ ಯಾತ್ರೆ ಎಲ್ಲರಿಗೂ ಸ್ಪೂರ್ತಿದಾಯಕ.

ಟೀಂ ಇಂಡಿಯಾ ಯಶಸ್ಸಿಗೆ ಕೋಚ್ ರಾಹುಲ್ ದ್ರಾವಿಡ್ ಕಾರ್ಯವೈಖರಿಯೂ ಕಾರಣ ಎಲ್ಲರೂ ಹೊಗಳುತ್ತಿದ್ದಾರೆ. ಆದರೆ ದ್ರಾವಿಡ್ ಗೆ ಸಹಾಯಕರಾಗಿ ತಂಡದಲ್ಲಿದ್ದ 19 ಸಹಾಯಕ ಸಿಬ್ಬಂದಿ ವರ್ಗದವರ ಹಿನ್ನಲೆ ಕೇಳಿದರೆ ನೀವು ಅಚ್ಚರಿಗೊಳಗಾಗುತ್ತೀರಿ.

ಟೀಂ ಇಂಡಿಯಾ ಆಟಗಾರರಿಗೆ ಸಹಾಯವಾಗಲು ತಂಡದಲ್ಲಿ ಮೆಂಟಲ್ ಕಂಡೀಷನಿಂಗ್ ಕೋಚ್, ಫಿಸಿಯೋಗಳು, ಭದ್ರತಾ ಸಿಬ್ಬಂದಿಗಳು, ಲಾಜಿಸ್ಟಿಕ್ ಮ್ಯಾನೇಜರ್, ಥ್ರೋ ಡೌನ್ ಸ್ಪೆಷಲಿಸ್ಟ್ ಎಲ್ಲರೂ ಇದ್ದರು. ಇವರ ಹಿನ್ನಲೆ ಮಾತ್ರ  ವಿಶೇಷವಾಗಿದೆ. ಇವರೆಲ್ಲರೂ ಕೋಚ್ ದ್ರಾವಿಡ್ ಗೆ ಅಂಡರ್ 19 ತಂಡದಲ್ಲಿ ಕೋಚ್ ಆಗಿದ್ದಾಗಲೇ ಜೊತೆಯಾಗಿದ್ದವರು.

ಟೀಂ ಇಂಡಿಯಾ ವಿಶ್ವಕಪ್ ಯಶಸ್ಸಿನಲ್ಲಿ ಇವರೆಲ್ಲರ ಪಾಲೂ ಇದೆ. ಸಹಾಯಕ ಸಿಬ್ಬಂದಿಗಳ ಪೈಕಿ ಫೀಲ್ಡಿಂಗ್ ಕೋಚ್ ಆಗಿದ್ದ ಟಿ. ದಿಲೀಪ್ ಓರ್ವ ಗಣಿತದ ಟ್ಯೂಷನ್ ಟೀಚರ್ ಆಗಿದ್ದವರು! ಮೆಂಟಲ್ ಕಂಡೀಷನಿಂಗ್ ಕೋಚ್ ಆಗಿದ್ದ ಸೋಹಂ ದೇಸಾಯಿ ಮೂಲತಃ ಓರ್ವ ಪರ್ವತಾರೋಹಿ. ವಿಡಿಯೋ ಮತ್ತು ಡಾಟಾ ಅನಲೈಸ್ ಮಾಡುತ್ತಿದ್ದ ಹರಿಪ್ರಸಾದ್ ಮೋಹನ್ ಇಂಜಿನಿಯರ್ ಆಗಿದ್ದವರು.

ಇನ್ನು, ಕ್ರಿಕೆಟಿಗರಿಗೆ ಮನರಂಜನೆ ಒದಗಿಸಲು ಡಿಜೆಯಾಗಿ ಮತ್ತು ಕ್ರಿಕೆಟಿಗರ ಕುಟುಂಬ, ಯೂನಿಫಾರ್ಮ್, ಮ್ಯಾಚ್ ಟಿಕೆಟ್ ಇತ್ಯಾದಿ ವ್ಯವಸ್ಥೆ ನೋಡಿಕೊಳ್ಳುತ್ತಿದ್ದವರು ರಿಶಿಕೇಶ್ ಉಪಾಧ್ಯಾಯ. ಇವರು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಬಾಲ್ಯದ ಗೆಳೆಯ. ಇವರಲ್ಲದೆ ಆಟಗಾರರ ಫಿಟ್ನೆಸ್, ತಂಡದ ಸೋಷಿಯಲ್ ಮೀಡಿಯಾ ಕಂಟೆಂಟ್ ನೀಡಲು, ಅಗತ್ಯ ಔಷಧ ನೀಡಲೆಂದೇ ಪ್ರತ್ಯೇಕ ಸ್ಟಾಫ್ ಗಳಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಸಿಸಿ ಹೊಸ ಸಿಇಓ ಆಗಿ ಭಾರತೀಯ ಸಂಜೋಗ್ ಗುಪ್ತಾ, ಇವರ ಸಾಧನೆ ಇಲ್ಲಿದೆ

ಅಭಿನಂದಿಸಲು ಸಿರಾಜ್‌ನನ್ನೇ ಕೈಬಿಟ್ಟ ಜಯ್‌ಶಾ: ಮುಸ್ಲಿಂ ಎಂಬ ಕಾರಣವೇ ಹೊಗಳಿಕೆಯಿಂದ ದೂರವಿರಲು ಕಾರಣವಾಯಿತೆ,ವಿವಾದ

IND vs ENG: ವೇಗಿ ಆಕಾಶ್ ದೀಪ್ ಕುಟುಂಬದ ಕತೆ ಕೇಳಿದ್ರೆ ಕಣ್ಣೀರೇ ಬರುತ್ತದೆ

IND vs ENG: ಮುಂದಿನ ಪಂದ್ಯಕ್ಕೆ ಈ ಇಬ್ಬರೂ ಕನ್ನಡಿಗರಿಗೆ ಗೇಟ್ ಪಾಸ್

IND vs ENG: ಗೆಲುವಿನ ಬಳಿಕ ಶುಭಮನ್ ಗಿಲ್ ಹೇಳಿದ ಒಂದು ಮಾತು ಇಂಗ್ಲೆಂಡ್ ಭಯ ಹೆಚ್ಚಿಸುತ್ತೆ

ಮುಂದಿನ ಸುದ್ದಿ
Show comments