Select Your Language

Notifications

webdunia
webdunia
webdunia
webdunia

ದ.ಆಫ್ರಿಕಾ ಹಣೆಯಲು ಹೊಸ ತಂತ್ರದೊಂದಿಗೆ ಕಣಕ್ಕಿಳಿಯಲಿದೆ ಟೀಂ ಇಂಡಿಯಾ

ದ.ಆಫ್ರಿಕಾ ಹಣೆಯಲು ಹೊಸ ತಂತ್ರದೊಂದಿಗೆ ಕಣಕ್ಕಿಳಿಯಲಿದೆ ಟೀಂ ಇಂಡಿಯಾ
London , ಭಾನುವಾರ, 11 ಜೂನ್ 2017 (08:34 IST)
ಲಂಡನ್: ಇಂದಿನ ಪಂದ್ಯ ಟೀಂ ಇಂಡಿಯಾ ಮತ್ತು  ದ. ಆಫ್ರಿಕಾ ಪಾಲಿಗೆ ಮಹತ್ವದ್ದು. ಎರಡೂ ತಂಡಗಳಿಗೂ ಇದು ಒಂಥರಾ ಕ್ವಾರ್ಟರ್ ಫೈನಲ್ ಇದ್ದ ಹಾಗೆ. ಬಹುಶಃ ಈ ದೈತ್ಯ ತಂಡಗಳಿಗೆ ಈ ಸ್ಥಿತಿ ತಂದಿಟ್ಟ ಪಾಕ್ ಮತ್ತು ಲಂಕಾ ತಂಡಗಳು ಇಂದು ತಮಾಷೆ ನೋಡುತ್ತಿರಬಹುದು.

 
ದ. ಆಫ್ರಿಕಾ ಎಷ್ಟೇ ಬಲಿಷ್ಠ ತಂಡವಾಗಿದ್ದರೂ, ಚಾಂಪಿಯನ್ಸ್ ಟ್ರೋಫಿಯಲ್ಲಿ ಅದರ ದಾಖಲೆ ಉತ್ತಮವಾಗಿಲ್ಲ. ಒಟ್ಟು ಮೂರು ಬಾರಿ ಈ ಟೂರ್ನಿಯಲ್ಲಿ ಉಭಯ ತಂಡಗಳು ಎದುರಾಗಿವೆ. ಈ ಪೈಕಿ ಮೂರೂ ಪಂದ್ಯಗಳನ್ನು ಭಾರತ ಗೆದ್ದುಕೊಂಡಿತ್ತು. ಅದರಲ್ಲೂ ಎಲ್ಲಾ ಪಂದ್ಯಗಳನ್ನು ಗೆದ್ದು ಭಾರತ ನಾಕ್ ಔಟ್ ಹಂತ ಪ್ರವೇಶಿಸಿತ್ತು.

ಆದರೆ ಹಿಂದಿನ ದಾಖಲೆಗಳು ಇಂದಿಗೆ ಅನ್ವಯವಾಗದು ಬಿಡಿ. ಇಂದು ಯಾರು ಚೆನ್ನಾಗಿ ಆಡುತ್ತಾರೋ ಅವರೇ ಸೆಮಿಫೈನಲ್ ಗೆ ಅರ್ಹತೆ ಪಡೆಯುತ್ತಾರೆ. ವಿಶೇಷವೆಂದರೆ ಉಭಯ ತಂಡಗಳೂ ಸಮಸ್ಥಿತಿಯಲ್ಲಿದೆ.

ಒಂದು ದುರ್ಬಲ ತಂಡದೆದುರು ಸೋತ ಶಾಕ್ ನಲ್ಲಿದೆ. ಅತ್ತ ಎಬಿಡಿ ವಿಲಿಯರ್ಸ್, ಇತ್ತ ವಿರಾಟ್ ಕೊಹ್ಲಿ ಸಿಡಿಯುವುದನ್ನೇ ಉಭಯ ತಂಡಗಳು ಕಾದು ಕೂತಿವೆ. ಇಬ್ಬರ ಆರಂಭಿಕ ಜೋಡಿ ಲಯದಲ್ಲಿದ್ದಾರೆ. ಆದರೆ ತಂತ್ರಗಾರಿಕೆಯನ್ನು ಸರಿಯಾಗಿ ಪ್ರಯೋಗಿಸುವಲ್ಲಿ ಭಾರತ ಎಡವುತ್ತಿದೆ.

ಹೀಗಾಗಿ ಹೊಸ ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿಯಲು ನಾಯಕ ಕೊಹ್ಲಿ ಯೋಜನೆ ರೂಪಿಸಿದ್ದಾರೆ. ಕಳೆದ ಎರಡೂ ಪಂದ್ಯಗಳಲ್ಲಿ ನಿಧಾನಗತಿಯ ಆರಂಭ ಕಂಡು ಉತ್ತಮ ಮೊತ್ತವನ್ನೇನೋ ಟೀಂ ಇಂಡಿಯಾ ಸಾಧಿಸಿತು. ಆದರೆ ನಿರೀಕ್ಷಿತ ರನ್ ಬರಲಿಲ್ಲ. ಅಲ್ಲದೆ, ಬೌಲಿಂಗ್ ಸಂಯೋಜನೆಯಲ್ಲೂ ಕೊಹ್ಲಿ ಎಡವಿದರು.

ಆದರೆ ಈ ಪಂದ್ಯಕ್ಕೆ ಅನುಭವಿ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆಯುವ ಸಾಧ್ಯತೆಯಿದೆ. ಅಲ್ಲದೆ ಮೊಹಮ್ಮದ್ ಶಮಿ ಆಡುವ ಬಳಗಕ್ಕೆ ಬಂದರೂ ಅಚ್ಚರಿಯಿಲ್ಲ. ಆದರೆ ಮಳೆ ಬೀಳದಿರಲಿ ಎನ್ನುವುದೇ ಎರಡೂ ತಂಡಗಳ ಪ್ರಾರ್ಥನೆ.

ಅಂಕ ಹಂಚಿ ಹೋದರೆ ಮತ್ತೆ ರನ್ ರೇಟ್ ನಂಬಿಕೊಂಡು ಕೂರಬೇಕಾಗುತ್ತದೆ. ಅದೇನೇ ಇದ್ದರೂ ಸಿಕ್ಕ ಅವಕಾಶವನ್ನು ಬಳಸಿಕೊಂಡು ಈ ಬಾರಿ ಗೆದ್ದೇ ಗೆಲ್ಲುತ್ತೇವೆ ಎಂದು ಛಲ ಹೊತ್ತು ಕುಳಿತಿದೆ ಟೀಂ ಇಂಡಿಯಾ. ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳುತ್ತದಾ ಕಾದು ನೋಡಬೇಕು.

 
ಸ್ಥಳ: ದಿ ಓವಲ್ ಮೈದಾನ
ಸಮಯ: ಭಾರತೀಯ ಕಾಲಮಾನ ಅಪರಾಹ್ನ 3.00 ಗಂಟೆ
ನೇರಪ್ರಸಾರ: ಸ್ಟಾರ್ ಸ್ಟೋರ್ಟ್ಸ್

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್ ಟ್ರೋಫಿ: ನಾಳೆ ದಕ್ಷಿಣ ಆಫ್ರಿಕಾ ನಾಯಕ ಎಬಿ ಡಿ ವಿಲಿಯರ್ಸ್ ಪಂದ್ಯ ಆಡೋದು ಡೌಟ್