Select Your Language

Notifications

webdunia
webdunia
webdunia
webdunia

ಚಾಂಪಿಯನ್ಸ್ ಟ್ರೋಫಿ: ನಾಳೆ ದಕ್ಷಿಣ ಆಫ್ರಿಕಾ ನಾಯಕ ಎಬಿ ಡಿ ವಿಲಿಯರ್ಸ್ ಪಂದ್ಯ ಆಡೋದು ಡೌಟ್

ಚಾಂಪಿಯನ್ಸ್ ಟ್ರೋಫಿ: ನಾಳೆ ದಕ್ಷಿಣ ಆಫ್ರಿಕಾ ನಾಯಕ ಎಬಿ ಡಿ ವಿಲಿಯರ್ಸ್ ಪಂದ್ಯ ಆಡೋದು ಡೌಟ್
ಲಂಡನ್ , ಶನಿವಾರ, 10 ಜೂನ್ 2017 (15:42 IST)
ಲಂಡನ್:ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ನಾಳಿನ ಟೀಂ ಇಂಡಿಯಾ ವಿರುದ್ಧದ ನಿರ್ಣಾಯಕ ಪಂದ್ಯಕ್ಕೆ ಕಾಲುನೋವಿನ ಸಮಸ್ಯೆಯಿಂದ ಬಳಲುತ್ತಿರುವ ದಕ್ಷಿಣ ಆಫ್ರಿಕಾ ನಾಯಕ ಎಬಿ ಡಿವಿಲಿಯರ್ಸ್ ಅಲಭ್ಯರಾಗಲಿದ್ದಾರೆ. 
 
ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಎಬಿಡಿ ವಿಲಿಯರ್ಸ್ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಟೀಂ ಇಂಡಿಯಾ ವಿರುದ್ಧ ನಡೆಯಲಿರುವ ಪಂದ್ಯದಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿದೆ.
 
ವಿಲಿಯರ್ಸ್ ಭಾರತ ಎದುರಿನ ಪಂದ್ಯಕ್ಕೂ ಮುನ್ನ ಇಂದು ಫಿಟ್ನೆಸ್‌ ಟೆಸ್ಟ್‌ ಒಳಗಾಗಲಿದ್ದಾರೆ. ಫಿಟ್ನೆಸ್ ಸಾಬೀತುಪಡಿಸಿದರೆ ಮಾತ್ರ ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಕ್ರಿಕೆಟ್‌ ಸೌಥ್‌ ಆಫ್ರಿಕಾ (ಸಿಎಸ್‌ಎ) ಖಚಿತಪಡಿಸಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

‘ಟೀಂ ಇಂಡಿಯಾಗೆ ಕೊಹ್ಲಿ-ಕುಂಬ್ಳೆ ಇಬ್ಬರೂ ಬೇಕು’