ಮುಂಬೈ: ಬಿಸಿಸಿಐ ಭಾರತೀಯ ಕ್ರಿಕೆಟಿಗರ ಸಂಭಾವನೆ ದುಪ್ಪಟ್ಟುಗೊಳಿಸಿದೆ. ಸದ್ಯಕ್ಕೆ ಪರಿಷ್ಕೃತವಾದ ಕ್ರಿಕೆಟಿಗರ ವೇತನ ನೋಡಿದರೆ ನೀವು ದಂಗಾಗದೇ ಇರಲಾರಿರಿ.
ಬಿಸಿಸಿಐ ಸಾಮಾನ್ಯ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಗ್ರೇಡ್ ಕೆಟಗರಿಗೆ ಸೇರುವ ಆಟಗಾರರಿಗೆ ಭಾರೀ ಸಂಭಾವನೆ ನಿಗದಿಯಾಗಿದೆ. ಈ ಹೊಸ ಸಂಭಾವನೆ ಕಳೆದ ವರ್ಷದ ಅಕ್ಟೋಬರ್ ನಿಂದ ಅನ್ವಯವಾಗಲಿದೆ.
ದರ್ಜೆ ಎ, ಬಿ ಮತ್ತು ಸಿ ಗೆ ಸೇರುವ ಆಟಗಾರರಿಗೆ ಹೊಸ ಸಂಭಾವನೆ ನಿಗದಿ ಮಾಡಲಾಗಿದೆ. ಎ ಕೆಟಗರಿಯಲ್ಲಿ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ಧೋನಿ, ಅಶ್ವಿನ್, ರೆಹಾನೆ, ಪೂಜಾರ, ಜಡೇಜಾ, ಮುರಳಿ ವಿಜಯ್ ಸೇರಿದ್ದಾರೆ. ಇವರಿಗೆ 2 ಕೋಟಿ ರೂ. ಸಂಭಾವನೆ ನೀಡಲಾಗುವುದು.
ಬಿ ಕೆಟಗರಿಯಲ್ಲಿ 1 ಕೋಟಿ ವೇತನ ಪಡೆಯಲಿರುವ ಕ್ರಿಕೆಟಿಗರೆಂದರೆ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ವೃದ್ಧಿಮಾನ್ ಸಹಾ, ಯುವರಾಜ್ ಸಿಂಗ್, ಜಸ್ಪ್ರೀತ್ ಬುಮ್ರಾ.
ಸಿ ಕೆಟಗರಿಯಲ್ಲಿರುವ ಶಿಖರ್ ಧವನ್, ಅಂಬಟಿ ರಾಯುಡು, ಅಮಿತ್ ಮಿಶ್ರಾ, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಕರುಣ್ ನಾಯರ್, ಹಾರ್ದಿಕ್ ಪಾಂಡ್ಯ, ಆಶೀಶ್ ನೆಹ್ರಾ, ಕೇದಾರ್ ಜಾದವ್, ಯಜುವೇಂದ್ರ ಚಾಹಲ್, ಪಾರ್ಥಿವ್ ಪಟೇಲ್, ಜಯಂತ್ ಯಾದವ್, ಮನ್ ದೀಪ್ ಸಿಂಗ್, ಧವಳ್ ಕುಲಕರ್ಣಿ, ಶಾರ್ದೂಲ್ ಠಾಕೂರ್, ರಿಷಬ್ ಪಂತ್ ಗೆ 50 ಲಕ್ಷ ರೂ. ಸಂಭಾವನೆ ಸಿಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ