Webdunia - Bharat's app for daily news and videos

Install App

ಬರ್ತ್ ಡೇ ದಿನಕ್ಕೆ ಧೋನಿಗೆ ಉಡುಗೊರೆ ನೀಡದ ಟೀಂ ಇಂಡಿಯಾ!

Webdunia
ಶನಿವಾರ, 7 ಜುಲೈ 2018 (09:22 IST)
ಕಾರ್ಡಿಫ್: ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ, ವಿಕೆಟ್ ಕೀಪರ್ ಧೋನಿಗೆ ಇಂದು ಜನ್ಮ ದಿನದ ಸಂಭ್ರಮ. ಆದರೆ ಧೋನಿಗೆ ಟೀಂ ಇಂಡಿಯಾ ಗೆಲುವಿನ ಉಡುಗೊರೆ ನೀಡಲು ವಿಫಲವಾಗಿದೆ.

ಇಂಗ್ಲೆಂಡ್ ವಿರುದ್ಧ ನಿನ್ನೆ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಸರಣಿ ಸಮಬಲ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು.

ಭಾರತದ ಪರ ನಾಯಕ ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 47 ರನ್, ಧೋನಿ 24 ಎಸೆತಗಳಲ್ಲಿ 32 ಹಾಗೂ ಸುರೇಶ್ ರೈನಾ 27 ರನ್ ಗಳಿಸಿದ್ದು ಬಿಟ್ಟರೆ ಉಳಿದವರಾರೂ ಚೆನ್ನಾಗಿ ಆಡಲಿಲ್ಲ. ಆರಂಭಿಕ ಆಘಾತ ಭಾರತದ ಸಾಧಾರಣ ಮೊತ್ತಕ್ಕೆ ಕಾರಣವಾಯಿತು.

ಇದಾದ ಬಳಿಕ ಬ್ಯಾಟಿಂಗ್ ಗೆ ಇಳಿದ ಇಂಗ್ಲೆಂಡ್ ಕೂಡಾ ಆರಂಭದಲ್ಲಿ ತಡವರಿಸಿತಾದರೂ ಮಧ್ಯಮ ಕ್ರಮಾಂಕದಲ್ಲಿ ಅಲೆಕ್ಸ್ ಹೇಲ್ಸ್ 51 ರನ್ ಗಳಿಸಿ ತಂಡಕ್ಕೆ ಗೆಲುವು ಕೊಡಿಸಿದರು. ದುರಾದೃಷ್ಟವೆಂದರೆ ಕಳೆದ ಪಂದ್ಯದಲ್ಲಿ ಐದು ವಿಕೆಟ್ ಕಿತ್ತಿದ್ದ ಕುಲದೀಪ್ ಯಾದವ್ ಈ ಪಂದ್ಯದಲ್ಲಿ ಒಂದೂ ವಿಕೆಟ್ ಕೀಳಲಿಲ್ಲ.  ಭಾರತದ ಸ್ಪಿನ್ನರ್ ಗಳನ್ನು ಇಂಗ್ಲೆಂಡ್ ಕ್ರಿಕೆಟಿಗರು ಸಮರ್ಥವಾಗಿ ಎದುರಿಸಿದ್ದು ಈ ಪಂದ್ಯದ ಸೋಲಿಗೆ ಕಾರಣವಾಯಿತು. ಇದರೊಂದಿಗೆ ಇಂಗ್ಲೆಂಡ್ ಒಂದೇ ಮೈದಾನದಲ್ಲಿ ಅತೀ ಹೆಚ್ಚು ಬಾರಿ ತಂಡವೊಂದು ಗೆದ್ದ ವಿಶ್ವ ದಾಖಲೆ ಮಾಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SL: ಟೀಂ ಇಂಡಿಯಾಗೆ ಲಂಕಾ ಎದುರು ಭರ್ಜರಿ ಜಯ: ಕನ್ನಡಿಗೆ ಸಿಕ್ತು ಬಂಪರ್

IND vs SL:ಥ್ಯಾಂಕ್ಸ್ ಮಗಾ… ಬಚಾವ್ ಮಾಡಿದ ಗೆಳೆಯ ದೇವದತ್ ಪಡಿಕ್ಕಲ್ ಗೆ ಮೈದಾನದಲ್ಲೇ ತಬ್ಬಿ ಕಿಸ್ ಕೊಟ್ಟ ಕೆಎಲ್ ರಾಹುಲ್ Video

IND vs SL: ಕ್ಯಾಪ್ಟನ್ ಅಂದ್ರೆ ಹೀಗಿರಬೇಕು… ಶುಭಮನ್ ಗಿಲ್ ಪಡೆದ ಈ ಅದ್ಭುತ ಕ್ಯಾಚ್ ನೋಡಿ ಕಣ್ತುಂಬಿಕೊಳ್ಳಬೇಕು

ಭಾರತ ತಂಡದ 600ನೇ ಚಾರಿತ್ರಿಕ ಪಂದ್ಯಕ್ಕೆ ವರುಣನ ಅವಕೃಪೆ: ಉತ್ತಮ ಸ್ಥಿತಿಯಲ್ಲಿ ಟೀಂ ಇಂಡಿಯಾ

ಲಂಕಾ ವಿರುದ್ಧದ ಟೆಸ್ಟ್‌ಗೂ ಮುನ್ನಾ ಶ್ರೀಲಂಕಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಟೀಂ ಇಂಡಿಯಾ, Video

ಮುಂದಿನ ಸುದ್ದಿ
Show comments