ಟೀಂ ಇಂಡಿಯಾ ಮುಂದಿನ ಸರಣಿ ಯಾವಾಗ, ಯಾರ ಜೊತೆ

Krishnaveni K
ಬುಧವಾರ, 28 ಆಗಸ್ಟ್ 2024 (09:48 IST)
ಮುಂಬೈ: ಬಹಳ ದಿನಗಳಿಂದ ಟೀಂ ಇಂಡಿಯಾ ಪಂದ್ಯಗಳೇ ಇಲ್ಲದೇ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಆದರೆ ಇತ್ತ ಕ್ರಿಕೆಟಿಗರು ಬಹುದಿನಗಳ ಬ್ರೇಕ್ ಖುಷಿ ಅನುಭವಿಸುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ಮುಂದಿನ ಸರಣಿ ಯಾವಾಗ, ಯಾರ ಜೊತೆ ಎನ್ನುವುದಕ್ಕೆ ಇಲ್ಲಿದೆ ವಿವರ.

ಟೀಂ ಇಂಡಿಯಾ ಕೊನೆಯದಾಗಿ ಶ್ರೀಲಂಕಾ ವಿರುದ್ಧ ಟಿ20 ಮತ್ತು ಏಕದಿನ ಸರಣಿ ಆಡಿತ್ತು. ಟೆಸ್ಟ್ ಸರಣಿ ಆಡದೆ ಅಂತೂ ತಿಂಗಳುಗಳೇ ಕಳೆದಿವೆ. ಆಗಸ್ಟ್ ಮೊದಲ ವಾರದಲ್ಲಿ ಭಾರತ ತಂಡ ಕೊನೆಯ ಪಂದ್ಯವನ್ನು ಆಡಿತ್ತು. ಅದಾದ ಬಳಿಕ ಇದೀಗ ಮೂರು ವಾರಗಳಿಂದ ಯಾವುದೇ ಪಂದ್ಯಗಳಿಲ್ಲ.

ಭಾರತ ತಂಡದ ಮುಂದಿನ ಸರಣಿ ಇರುವುದು ಬಾಂಗ್ಲಾದೇಶದ ವಿರುದ್ಧ. ಇದು ಆರಂಭವಾಗುವುದ ಮುಂದಿನ ತಿಂಗಳು. ಈ ಸರಣಿಯಲ್ಲಿ ಭಾರತ ತಂಡ ಟೆಸ್ಟ್ ಮತ್ತು ಟಿ20 ಸರಣಿಯನ್ನಾಡಲಿದೆ. ಮೊದಲು ಎರಡು ಟೆಸ್ಟ್ ಪಂದ್ಯಗಳ ಸರಣಿ ಆಡಲಿರುವ ಭಾರತ ನಂತರ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ.

ಸೆಪ್ಟೆಂಬರ್ 19 ರಿಂದ 23 ರವರೆಗೆ ನಡೆಯಲಿರುವ ಟೆಸ್ಟ್ ಪಂದ್ಯ ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ನಡೆಯಲಿದೆ. ಎರಡನೇ ಪಂದ್ಯ ಸೆಪ್ಟೆಂಬರ್ 27 ರಿಂದ ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ. ಅದಾದ ಬಳಿಕ ಅಕ್ಟೋಬರ್ 6 ರಿಂದ ಟಿ20 ಸರಣಿ ಆರಂಭವಾಗಲಿದೆ. ಅಕ್ಟೋಬರ್ 12 ಕ್ಕೆ ಟಿ20 ಸರಣಿ ಮುಕ್ತಾಯವಾಗುವುದು. ಬಹುಶಃ ಭಾರತ ತಂಡಕ್ಕೆ ಇಷ್ಟು ಸುದೀರ್ಘ ಬ್ರೇಕ್ ಸಿಕ್ಕಿದ್ದು ಎಷ್ಟೋ ದಿನಗಳ ನಂತರ ಎನ್ನಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸೂರ್ಯಕುಮಾರ್ ಯಾದವ್ ನಾಯಕತ್ವಕ್ಕೂ ಸದ್ಯದಲ್ಲೇ ಕೊಕ್

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೇ ಟೀಂ ಇಂಡಿಯಾದಲ್ಲಿ ಸ್ಥಾನ ಗ್ಯಾರಂಟಿ ಇಲ್ಲ

ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಇದೇ ಕಾರಣಕ್ಕೆ

ಆಸ್ಟ್ರೇಲಿಯಾ ವಿರುದ್ಧ ಸರಣಿಗೆ ಟೀಂ ಇಂಡಿಯಾ ಪ್ರಕಟ: ರೋಹಿತ್ ಶರ್ಮಾ, ಕೊಹ್ಲಿ ಕಮ್ ಬ್ಯಾಕ್

ಕ್ಯಾಪ್ಟನ್ಸಿಯಿಂದ ರೋಹಿತ್ ಶರ್ಮಾಗೆ ಕೊಕ್: ಈಡೇರದೇ ಹೋಯ್ತಾ ಆ ಕನಸು

ಮುಂದಿನ ಸುದ್ದಿ
Show comments