Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ನೂತನ ಜೆರ್ಸಿ: ಬೆಲೆ ಎಷ್ಟು ಇಲ್ಲಿದೆ ಡೀಟೈಲ್ಸ್

Rohit Sharma

Krishnaveni K

ಮುಂಬೈ , ಶುಕ್ರವಾರ, 10 ಮೇ 2024 (09:31 IST)
Photo Courtesy: Twitter
ಮುಂಬೈ: ಮುಂಬರುವ ಟಿ20 ವಿಶ್ವಕಪ್ ಗೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಹೊಸ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ನೂತನ ಜೆರ್ಸಿಯನ್ನು ರೋಹಿತ್ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಅನಾವರಣಗೊಳಿಸಿದ್ದಾರೆ.

ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆ ವಿನ್ಯಾಸ ಮಾಡಲಾಗಿರುವ ನೂತನ ಜೆರ್ಸಿಯಲ್ಲಿ ಕೈ ಭಾಗ ಕೇಸರಿ ಮತ್ತು ಉಳಿದ ಭಾಗ ನೀಲಿ ಬಣ್ಣದಿಂದ ಕೂಡಿದೆ. ಇದಕ್ಕೂ ಮೊದಲು ಒಮ್ಮೆ ಟೀಂ ಇಂಡಿಯಾ ಜೆರ್ಸಿ ಹೆಚ್ಚು ಕಡಿಮೆ ಇದೇ ರಂಗಿನಲ್ಲಿತ್ತು. ಈಗ ಹೊಸ ವಿನ್ಯಾಸದೊಂದಿಗೆ ನೀಲಿ ಮತ್ತು ಕೇಸರಿ ಬಣ್ಣದ ಜೆರ್ಸಿ ಹೊರತರಲಾಗಿದೆ. ಜೊತೆಗೆ ಕುತ್ತಿಗೆ ಭಾಗದಲ್ಲಿ ತ್ರಿವರ್ಣ ಧ್ವಜದ ರಂಗು ಇದೆ.

ಜೂನ್ ಮೊದಲ ವಾರದಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ಈಗಾಗಲೇ ಎಲ್ಲಾ ತಂಡಗಳೂ ತಯಾರಿ ಮಾಡಿಕೊಂಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಈ ಹೊಸ ಜೆರ್ಸಿ ಆನ್ ಲೈನ್ ನಲ್ಲಿ ಸೋರಿಕೆಯಾಗಿತ್ತು. ಇದೀಗ ಅಧಿಕೃತವಾಗಿ ಬಿಸಿಸಿಐಯೇ ಜೆರ್ಸಿ ಅನಾವರಣಗೊಳಿಸಿದೆ.

ಈ ಜೆರ್ಸಿಯನ್ನು ಆನ್ ಲೈನ್ ಮೂಲಕ ಖರೀದಿಸಲು ಅವಕಾಶವಿದೆ. ಒಂದು ಜೆರ್ಸಿಯ ಬೆಲೆ 999 ರೂ. ಮೌಲ್ಯ ಹೊಂದಿದೆ. ಬೇರೆ ಬೇರೆ ಸೈಝ್ ನಲ್ಲಿ ಈ ಜೆರ್ಸಿ ಆನ್ ಲೈನ್ ನಲ್ಲಿ ಖರೀದಿಗೆ ಲಭ್ಯವಿದೆ. ಆಡಿಡಾಸ್ ಬ್ರ್ಯಾಂಡ್ ನ ಜೆರ್ಸಿ ನೋಡಲು ಸುಂದರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಯನ್ನೇ ನಾಯಕತ್ವದಿಂದ ಕಿತ್ತುಹಾಕಿದ್ದ ಸಂಜೀವ್ ಗೊಯೆಂಕಾ ಹಿನ್ನಲೆ ತಿಳಿಯಿರಿ