ಚೆನ್ನೈ: ಮಧ್ಯಾಹ್ನದ ಊಟದ ವಿರಾಮದವರೆಗೂ ಈ ಪಂದ್ಯ ಹೀಗೊಂದು ತಿರುವು ಪಡೆಯಬಹುದೆಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಆದರೆ ಎಲ್ಲಾ ರವೀಂದ್ರ ಜಡೇಜಾ ಮ್ಯಾಜಿಕ್. ಭಾರತ ಅಂತಿಮ ಪಂದ್ಯವನ್ನು ಇನಿಂಗ್ಸ್ ಮತ್ತು 75 ರನ್ ಗಳಿಂದ ಗೆದ್ದುಕೊಂಡಿತು.
ಇದರೊಂದಿಗೆ ಐದು ಪಂದ್ಯಗಳ ಸರಣಿಯನ್ನು 4-0 ಅಂತರದಿಂದ ಗೆದ್ದುಕೊಂಡಿತು. ಜಡೇಜಾ ಒಟ್ಟು 7 ವಿಕೆಟ್ ಪಡೆದು ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳನ್ನು ಒಬ್ಬೊಬ್ಬರಾಗಿ ಪೆವಿಲಿಯನ್ ಗೆ ಮರಳಿಸಿದರು. ಮಧ್ಯಾಹ್ನದ ನಂತರ ಪಿಚ್ ಕೊಂಚ ಸ್ಪಿನ್ನರ್ ಗಳಿಗೆ ನೆರವು ಪಡೆಯುತ್ತಿದ್ದುದೇ ಭಾರತದ ಗೆಲುವಿಗೆ ಕಾರಣವಾಯ್ತು.
ಇದರೊಂದಿಗೆ ಇಂಗ್ಲೆಂಡ್ ಭಾರತದಲ್ಲಿ ಹೀನಾಯ ಸರಣಿ ಸೋಲು ಕಂಡಿತು. ಇದಕ್ಕಿಂತ ಮೊದಲು ಮೊಹಮ್ಮದ್ ಅಜರುದ್ದೀನ್ ನೇತೃತ್ವದಲ್ಲಿ ಭಾರತ 3-0 ಅಂತರದಿಂದ ಗೆದ್ದಿದ್ದೇ ಅತೀ ದೊಡ್ಡ ಗೆಲುವಾಗಿತ್ತು. ಆ ದಾಖಲೆಯನ್ನು ಕೊಹ್ಲಿ ಪಡೆ ಅಳಿಸಿ ಹಾಕಿತು. ಮತ್ತೊಮ್ಮೆ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 400 ಪ್ಲಸ್ ರನ್ ಕಲೆ ಹಾಕಿಯೂ ಸೋತಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ