ಬಾರ್ಡರ್-ಗವಾಸ್ಕರ್ ಟೆಸ್ಟ್: ಇಂಧೋರ್ ಪಿಚ್ ನಲ್ಲಿ ಕುಸಿದ ಟೀಂ ಇಂಡಿಯಾ

Webdunia
ಬುಧವಾರ, 1 ಮಾರ್ಚ್ 2023 (11:13 IST)
ಇಂಧೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಅಗ್ರ ಕ್ರಮಾಂಕ ವೈಫಲ್ಯಕ್ಕೀಡಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ರೋಹಿತ್-ಶುಬ್ಮನ್ ಗಿಲ್ ಉತ್ತಮ ಆರಂಭ ನೀಡುವ ಸೂಚನೆ ನೀಡಿದರು. ಆದರೆ ರೋಹಿತ್ 12 ಕ್ಕೆ ಔಟಾದೊಡನೆ ಭಾರತದ ಕುಸಿತ ಆರಂಭವಾಯಿತು.

ಬೌನ್ಸ್ ಮತ್ತು ಟರ್ನ್ ಪಡೆಯುತ್ತಿರುವ ಪಿಚ್ ನಲ್ಲಿ ಸ್ಪಿನ್ನರ್ ಗಳು ಸಂಪೂರ್ಣ ಮೇಲುಗೈ ಸಾಧಿಸುತ್ತಿದ್ದಾರೆ. ಗಿಲ್ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿ 21 ರನ್ ಗಳಿಸಿ ಔಟಾದರು. ಚೇತೇಶ್ವರ ಪೂಜಾರ ಕೇವಲ 1, ಶ್ರೇಯಸ್ ಅಯ್ಯರ್ ಶೂನ್ಯ, ರವೀಂದ್ರ ಜಡೇಜಾ 4 ರನ್ ಗಳಿಸಿ ಔಟಾದರು. ಬಳಿಕ ವಿರಾಟ್ ಕೊಹ್ಲಿ-ಶ್ರೀಕರ್ ಭರತ್ ಕೊಂಚ ಚೇತರಿಕೆಯ ಲಕ್ಷಣ ತೋರಿದರಾದರೂ 22 ರನ್ ಗಳಿಸಿದ್ದ ಕೊಹ್ಲಿ ಇದೀಗ ಔಟಾಗಿ ಪೆವಿಲಿಯನ್ ಸೇರಿಕೊಂಡರು. ಇದರೊಂದಿಗೆ ಭಾರತ 6 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿ ಸಂಕಷ್ಟ ಸ್ಥಿತಿಯಲ್ಲಿದೆ. ಭರತ್ 10 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಸ್ ಅಯ್ಯರ್‌ ತಂದೆಯಿಂದಲೇ ಬಂತು ಅಭಿಮಾನಿಗಳಿಗೆ ಸಂದೇಶ, ಇಲ್ಲಿದೆ ಮಾಹಿತಿ

ರೋಹಿತ್, ವಿರಾಟ್ ಕೊಹ್ಲಿ ಟೀಕಕಾರರಿಗೆ ಚಾಟಿ ಬೀಸಿದ ಎಬಿ ಡಿಲಿವಿಯರ್ಸ್‌

ಗಾಯಗೊಂಡ ಪ್ರತೀಕಾ ರಾವಲ್ ಜಾಗಕ್ಕೆ ಸ್ಥಾನ ಗಿಟ್ಟಿಸಿಕೊಂಡ ಶಫಾಲಿ ವರ್ಮಾ

ಶ್ರೇಯಸ್ ಅಯ್ಯರ್ ಪೋಷಕರ ಆಗಮನಕ್ಕಾಗಿ ಕಾಯುತ್ತಿರುವ ಬಿಸಿಸಿಐ, ಯಾಕೆ ಗೊತ್ತಾ

ಶ್ರೇಯಸ್ ಅಯ್ಯರ್ ಹೇಗಿದ್ದಾರೆ ಎಂದಿದ್ದಕ್ಕೆ ಸೂರ್ಯಕುಮಾರ್ ಯಾದವ್ ಹೇಳಿದ್ದೇನು

ಮುಂದಿನ ಸುದ್ದಿ
Show comments