ಟೀಂ ಇಂಡಿಯಾದ ಅತಿಯಾದ ಪ್ರಯೋಗಕ್ಕೆ ಛೀಮಾರಿ

Webdunia
ಭಾನುವಾರ, 30 ಜುಲೈ 2023 (08:30 IST)
ಬಾರ್ಬಡೋಸ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಅತಿಯಾದ ಪ್ರಯೋಗ ಮಾಡಲು ಹೋಗಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ.

ದ್ವಿತೀಯ ಏಕದಿನ ಪಂದ್ಯವನ್ನು 6 ವಿಕೆಟ್ ಗಳಿಂದ ಗೆದ್ದ ವಿಂಡೀಸ್ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಈ ಪಂದ್ಯದಿಂದ ಹೊರಗುಳಿದಿದ್ದರು. ಅವರ ಬದಲು ಅಕ್ಸರ್ ಪಟೇಲ್, ಸಂಜು ಸ್ಯಾಮ್ಸನ್ ಗೆ ಅವಕಾಶ ನೀಡಲಾಗಿತ್ತು. ಆರಂಭಿಕ ಇಶಾನ್ ಕಿಶನ್ 55, ಶುಬ್ಮನ್ ಗಿಲ್ 34 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವ ಬ್ಯಾಟಿಂಗ್ ಬರಲಿಲ್ಲ. ವಿಂಡೀಸ್ ನ ದುರ್ಬಲ ಬೌಲಿಂಗ್ ಎದುರೂ ಟೀಂ ಇಂಡಿಯಾ ಯುವ ಬ್ಯಾಟಿಗರು ಪರದಾಡಿತು. ಸೂರ್ಯಕುಮಾರ್ ಯಾದವ್ 24 ರನ್, ಶ್ರಾದ್ಧೂಲ್ ಠಾಕೂರ್ 16 ರನ್ ಗಳಿಸದೇ ಇದ್ದಿದ್ದರೆ ತಂಡದ ಮೊತ್ತ 150 ಪ್ಲಸ್ ಕೂಡಾ ದಾಟುತ್ತಿರಲಿಲ್ಲ.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ವಿಂಡೀಸ್ 36.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಮೊದಲ ಜಯ ಕಂಡಿತು. ನಾಯಕನ ಆಟವಾಡಿದ ಶೈ ಹೋಪ್ಸ್ ಅಜೇಯ 63 ರನ್ ಸಿಡಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಕಾರ್ಟಿ ಅಜೇಯ 48 ರನ್ ಗಳಿಸಿದರು. ಭಾರತದ ಪರ ಶಾರ್ದೂಲ್ ಠಾಕೂರ್ 3,ಕುಲದೀಪ್ ಯಾದವ್ 1 ವಿಕೆಟ್ ಕಬಳಿಸಿದರು. ಟೀಂ ಇಂಡಿಯಾ ಈ ಅತಿಯಾದ ಪ್ರಯೋಗದಿಂದಾಗಿ ಅಭಿಮಾನಿಗಳಿಂದ ಛೀಮಾರಿ ಸಿಕ್ಕಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮಹಿಳಾ ವಿಶ್ವಕಪ್‌ ಕ್ರಿಕೆಟ್‌: ಭಾರತ ವಿರುದ್ಧ ಸೋಲಿನ ಬೆನ್ನಲ್ಲೇ ಪಾಕ್‌ ಆಟಗಾರ್ತಿಗೆ ಮತ್ತೊಂದು ಶಾಕ್‌

Video: ಪುರುಷರ ತಂಡದಂತೇ ಮಹಿಳಾ ಕ್ರಿಕೆಟಿಗರೂ ಪಾಕಿಸ್ತಾನವನ್ನು ಸೋಲಿಸಿದ್ರು ಮೂತಿಯೂ ನೋಡದೇ ಬಂದ್ರು

Video: ಮೈದಾನದಲ್ಲಿ ಸ್ಪ್ರೇ ಮಾಡಿದ ಪಾಕಿಸ್ತಾನ ಆಟಗಾರ್ತಿಯರು, ಪಂದ್ಯ ಸ್ಥಗಿತವಾಗಿದ್ದೇಕೆ ಗೊತ್ತಾ

INDW vs PAKW: ಟಾಸ್ ವೇಳೆ ಭಾರತಕ್ಕೆ ಮೋಸ ಮಾಡಿದ ಪಾಕಿಸ್ತಾನ ನಾಯಕಿ: ವಿಡಿಯೋ ವೈರಲ್

INDWvsPAKW: ಕೈ ಕುಲುಕುವುದು ಬಿಡಿ, ಮುಖವೂ ನೋಡದ ಹರ್ಮನ್ ಪ್ರೀತ್ ಕೌರ್

ಮುಂದಿನ ಸುದ್ದಿ
Show comments