ಭಾರತ-ದ.ಆಫ್ರಿಕಾ ಏಕದಿನ: ಟೀಂ ಇಂಡಿಯಾಗೆ ಹೋರಾಡಿದರೂ ದಕ್ಕದ ಜಯ

Webdunia
ಸೋಮವಾರ, 24 ಜನವರಿ 2022 (08:15 IST)
ಪಾರ್ಲ್: ಭಾರತ ಮತ್ತು ದ.ಆಫ್ರಿಕಾ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಹೋರಾಡಿದರೂ ಟೀಂ ಇಂಡಿಯಾದ ಅದೃಷ್ಟ ಮಾತ್ರ ಬದಲಾಗಲಿಲ್ಲ.

ಮೂರನೇ ಏಕದಿನ ಪಂದ್ಯದಲ್ಲಿ ಇನ್ನೇನು ಗೆಲ್ಲುತ್ತದೆ ಎಂದುಕೊಂಡಿದ್ದಾಗ ಕೊನೆಯ ಹಂತದಲ್ಲಿ ವಿಕೆಟ್ ಕಳೆದುಕೊಂಡು 4 ರನ್ ಗಳಿಂದ ಸೋತು ಸರಣಿ ವೈಟ್ ವಾಶ್ ಅವಮಾನಕ್ಕೀಡಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ 287 ರನ್ ಗಳಿಸಿತ್ತು.

ಈ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾಗೆ ನಾಯಕ  ಕೆಎಲ್ ರಾಹುಲ್ ಕೇವಲ 9 ರನ್ ಗಳಿಸಿ ಔಟಾದರೂ, ಶಿಖರ್ ಧವನ್ (61), ವಿರಾಟ್ ಕೊಹ್ಲಿ (65) ಜೋಡಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ರಿಷಬ್ ಪಂತ್ ಶೂನ್ಯಕ್ಕೆ ನಿರ್ಗಮಿಸಿದ್ದು ಮತ್ತು ಶ್ರೇಯಸ್‍ ಐಯರ್ ಮತ್ತೆ ಇನಿಂಗ್ಸ್ ಕಟ್ಟಲು ವಿಫಲರಾಗಿದ್ದು ಭಾರತಕ್ಕೆ ದುಬಾರಿಯಾಯಿತು.

ಹಾಗಿದ್ದರೂ ದೀಪಕ್ ಚಹರ್ ಹೊಡೆಬಡಿಯ ಆಟದ ಮೂಲಕ ಗೆಲುವಿನ ಆಸೆ ಚಿಗುರಿಸಿದ್ದರು. ಇನ್ನೇನು ಭಾರತ ಗೆದ್ದೇ ಗೆಲ್ಲುತ್ತದೆ ಎನ್ನುವ ಹಂತದಲ್ಲಿ 34 ಎಸೆತಗಳಲ್ಲಿ 54 ರನ್ ಗಳಿಸಿದ್ದ ದೀಪಕ್ ಚಹರ್ ಔಟಾಗಿ ನಿರಾಸೆ ಅನುಭವಿಸಿದರು. ಇದರೊಂದಿಗೆ ಭಾರತದ ಕುಸಿತ ಆರಂಭವಾಯ್ತು. ಗೆಲುವಿಗೆ 10 ರನ್ ಗಳಿದ್ದಾಗ ಸತತವಾಗಿ ಕೊನೆಯ ಎರಡು ವಿಕೆಟ್ ಕಳೆದುಕೊಂಡು 49.2 ಓವರ್ ಗಳಲ್ಲಿ 283 ರನ್ ಗಳಿಗೆ ಆಲೌಟ್ ಆಗಿ ಸೋಲು ಅನುಭವಿಸುವಂತಾಯಿತು. ಇದರೊಂದಿಗೆ ಭಾರತ ಕೆಎಲ್ ರಾಹುಲ್ ನೇತೃತ್ವದಲ್ಲಿ ಸರಣಿಯ ಎಲ್ಲಾ ಪಂದ್ಯಗಳನ್ನೂ ಸೋತಂತಾಯಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಡುಗೆ ಸಿಬ್ಬಂದಿ ಮೇಲೆ ಅಮಾನುಷ ಹಲ್ಲೆ ಮಾಡಿದ ಪಂಜಾಬ್ ಕಿಂಗ್ಸ್ ಕ್ರಿಕೆಟಿಗ ಶಶಾಂಕ್ ಸಿಂಗ್ Viral video

IND vs ENG: ಟೀಂ ಇಂಡಿಯಾ, ಇಂಗ್ಲೆಂಡ್ ಟಿ20 ಸರಣಿ ಯಾವಾಗ, ಎಲ್ಲಿ ಲೈವ್ ವೀಕ್ಷಿಸಬೇಕು ಇಲ್ಲಿದೆ ವಿವರ

ಗೌತಮ್ ಗಂಭೀರ್ ಮಾತ್ರ ಬೇಡಪ್ಪ.. ಟೀಂ ಇಂಡಿಯಾ ಕೋಚ್ ಗೆ ಐರ್ಲೆಂಡ್ ನಿಂದ ಎಂಥಾ ಅವಮಾನ

ICC Women’s T20 WC: ಭಾರತ ವನಿತೆಯರ ಸೋಲಿಗೆ ಇದೇ ಮೂರು ಕಾರಣ

ಸ್ಟಾರ್ ಸಂಸ್ಕೃತಿ ಕೊನೆಗಾಣಿಸ್ತೀನಿ ಎಂದು ಬಂದು ಟೀಂ ಇಂಡಿಯಾವನ್ನೇ ಫಿನಿಶ್ ಮಾಡಿದ್ರಲ್ಲೋ ಗಂಭೀರ್, ಅಗರ್ಕರ್

ಮುಂದಿನ ಸುದ್ದಿ
Show comments