ಮುಂಬೈ: ಹಲವು ಗೊಂದಲಗಳ ನಡುವೆ ನಾಳೆ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ಆಯ್ಕೆ ಮಾಡಲು ನಾಳೆ ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಸಭೆ ಸೇರುವ ಸಾಧ್ಯತೆಯಿದೆ.
ಇದೀಗ ನಿನ್ನೆಯಷ್ಟೇ ನಾಯಕ ಸ್ಥಾನದಿಂದ ಕೆಳಗಿಳಿದ ಧೋನಿಯ ಮೇಲೇ ಎಲ್ಲರ ದೃಷ್ಟಿ. ಕಳೆದ ಎರಡು ತಿಂಗಳಿನಿಂದ ಅವರು ಯಾವುದೇ ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ. ಇದೀಗ ಕೇವಲ ಆಟಗಾರನಾಗಿ ಈ ಸರಣಿಗೆ ಧೋನಿ ಆಯ್ಕೆಯಾಗುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.
ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಜಯಂತ್ ಯಾದವ್ ಗೆ ಆಸ್ಟ್ರೇಲಿಯಾ ಸರಣಿ ದೃಷ್ಟಿಯಿಂದ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಇವರಲ್ಲದೆ ಹಲವು ಆಟಗಾರರು ಗಾಯಗೊಂಡು ಗೂಡು ಸೇರಿದ್ದಾರೆ. ಇವರ ಬದಲಿಗೆ ರಣಜಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಯಿದೆ.
ಜನವರಿ 15 ರಿಂದ ಸರಣಿ ಆರಂಭವಾಗಲಿದ್ದು, 2017 ರ ಚಾಂಪಿಯನ್ಸ್ ಟ್ರೋಫಿ ದೃಷ್ಟಿಯಿಂದ ಯುವ ತಂಡವೊಂದನ್ನು ಕಟ್ಟಲು ಆಯ್ಕೆ ಸಮಿತಿ ಚಿಂತಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ