ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಸರಣಿ ಆಡಲು ಟೀಂ ಇಂಡಿಯಾ ಕಾಲಿಟ್ಟಾಗಿನಿಂದ ಒಬ್ಬರಾದ ಮೇಲೊಬ್ಬರಂತೆ ಗಾಯಾಳುಗಳ ಪಟ್ಟಿ ಸೇರಿಕೊಳ್ಳುತ್ತಿದ್ದಾರೆ.
									
										
								
																	
ಆರಂಭದಲ್ಲಿ ತಲೆಗೆ ಚೆಂಡು ಬಡಿದು ರವೀಂದ್ರ ಜಡೇಜಾ ಸೀಮಿತ ಓವರ್ ಗಳ ಸರಣಿಯಿಂದ ಹೊರಬಿದ್ದಿದ್ದರು. ಅದಾದ ಬಳಿಕ ಅವರು ಎರಡನೇ ಟೆಸ್ಟ್ ಪಂದ್ಯದ ವೇಳೆಗೆ ಕಣಕ್ಕೆ ಮರಳಿದ್ದರು. ಆದರೆ ಅವರೀಗ ಮತ್ತೆ ಗಾಯಾಳುವಾಗಿದ್ದಾರೆ. ಮೂರನೇ ದಿನದಾಟದಲ್ಲಿ ಕೈ ಬೆರಳಿಗೆ ಗಾಯಮಾಡಿಕೊಂಡಿದ್ದಾರೆ. ಇದೇ ಟೆಸ್ಟ್ ನ ದ್ವಿತೀಯ ದಿನದಾಟದಲ್ಲಿ ಬ್ಯಾಟಿಂಗ್ ವೇಳೆ ರಿಷಬ್ ಪಂತ್ ಕೈಗೆ ಚೆಂಡು ಬಡಿದು ಗಾಯ ಮಾಡಿಕೊಂಡಿದ್ದರು. ಆದರೆ ಅವರ ಗಾಯ ಗಂಭೀರವಲ್ಲ ಎಂದು ತಿಳಿದುಬಂದಿದೆ.
									
			
			 
 			
 
 			
			                     
							
							
			        							
								
																	ಇನ್ನು, ಭುವನೇಶ‍್ವರ್ ಕುಮಾರ್, ಇಶಾಂತ್ ಶರ್ಮ ಇನ್ನೂ ಚೇತರಿಸಿಕೊಂಡಿಲ್ಲ. ಮೊಹಮ್ಮದ್ ಶಮಿ ಮೊದಲ ಟೆಸ್ಟ್ ನಲ್ಲಿ ಗಾಯಗೊಂಡರೆ, ಉಮೇಶ್ ಯಾದವ್ ದ್ವಿತೀಯ ಟೆಸ್ಟ್ ನಲ್ಲಿ ಗಾಯಗೊಂಡು ಭಾರತಕ್ಕೆ ಮರಳಿದ್ದಾರೆ. ಇನ್ನು ಕೆಎಲ್ ರಾಹುಲ್, ಆಡದೇ ಗಾಯಗೊಂಡು ತವರು ಸೇರಿಕೊಂಡಿದ್ದಾರೆ. ಒಟ್ಟಾರೆ ಇಡೀ ಸರಣಿ ಮುಗಿಯುವಷ್ಟರಲ್ಲಿ ತಂಡದಲ್ಲಿ ಅರ್ಧಕ್ಕಿಂತ ಹೆಚ್ಚು ಸದಸ್ಯರು ಗಾಯದ ಗೂಡು ಸೇರಿಕೊಂಡಿದ್ದಾರೆ.