Select Your Language

Notifications

webdunia
webdunia
webdunia
webdunia

ಭಾರತ-ಬಾಂಗ್ಲಾ ಟೆಸ್ಟ್: ಟೀಂ ಇಂಡಿಯಾ ಹಿಡಿತದಲ್ಲಿ ಬಾಂಗ್ಲಾ

ಭಾರತ-ಬಾಂಗ್ಲಾ ಟೆಸ್ಟ್: ಟೀಂ ಇಂಡಿಯಾ ಹಿಡಿತದಲ್ಲಿ ಬಾಂಗ್ಲಾ
ಢಾಕಾ , ಗುರುವಾರ, 22 ಡಿಸೆಂಬರ್ 2022 (16:34 IST)
ಢಾಕಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ದಿನದಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೇ 19 ರನ್ ಗಳಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾ ಮೊದಲ ಇನಿಂಗ್ಸ್ ನಲ್ಲಿ 227 ಕ್ಕೆ ಆಲೌಟ್ ಆಯಿತು. ಮೊಮಿನುಲ್ 84 ರನ್ ಗಳಿಸಿ ಮಿಂಚಿದರು. ಭಾರತದ ಪರ ಉಮೇಶ್ ಯಾದವ್, ರವಿಚಂದ್ರನ್ ಅಶ್ವಿನ್ ತಲಾ 4 ವಿಕೆಟ್ ಮತ್ತು ಜಯದೇವ್ ಉನಾದ್ಕಟ್ 2 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾ ಇದೀಗ 8 ಓವರ್ ಗಳ ಆಟ ಆಡಿದ್ದು 19 ರನ್ ಗಳಿಸಿದೆ. ಆರಂಭಿಕರಾದ ಕೆಎಲ್ ರಾಹುಲ್ 3 ಮತ್ತು ಶುಬ್ನಂ ಗಿಲ್ 14 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಭಾರತ ಇನ್ನೂ 208 ರನ್ ಗಳ ಹಿನ್ನಡೆಯಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಬಾಂಗ್ಲಾ ಟೆಸ್ಟ್: ಭೋಜನ ವಿರಾಮಕ್ಕೆ ಮೊದಲು ಬಾಂಗ್ಲಾ ಎರಡು ವಿಕೆಟ್ ಪತನ