Select Your Language

Notifications

webdunia
webdunia
webdunia
webdunia

ಐಪಿಎಲ್ ಗೂ ಮೊದಲೇ ಸ್ಟೀವ್ ಸ್ಮಿತ್-ಮ್ಯಾಕ್ಸ್ ವೆಲ್ ಧಮಾಕ! ಟೀಂ ಇಂಡಿಯಾ ಸುಸ್ತೋ ಸುಸ್ತು

ಐಪಿಎಲ್ ಗೂ ಮೊದಲೇ ಸ್ಟೀವ್ ಸ್ಮಿತ್-ಮ್ಯಾಕ್ಸ್ ವೆಲ್ ಧಮಾಕ! ಟೀಂ ಇಂಡಿಯಾ ಸುಸ್ತೋ ಸುಸ್ತು
ರಾಂಚಿ , ಗುರುವಾರ, 16 ಮಾರ್ಚ್ 2017 (16:35 IST)
ರಾಂಚಿ: ತೃತೀಯ ಟೆಸ್ಟ್ ನ ಮೊದಲ ದಿನದ ಮೊದಲ ಅವಧಿಯ ಆಟ ನೋಡಿದರೆ ಟೀಂ ಇಂಡಿಯಾ ಇಂದು ಆಸ್ಟ್ರೇಲಿಯಾವನ್ನು ಬೇಗನೇ ಆಲೌಟ್ ಮಾಡುತ್ತದೆ ಅನಿಸಿತ್ತು. ಆದರೆ ಭೋಜನ ವಿರಾಮದಲ್ಲಿ ಆಸೀಸ್ ಬ್ಯಾಟ್ಸ್ ಮನ್ ಗಳು ಏನು ತಿಂದು ಬಂದಿದ್ದರೋ, ಭರ್ಜರಿ ಆಟವಾಡಿದರು.

 
ಭೋಜನ ವಿರಾಮದ ನಂತರ ಕೇವಲ ಒಂದು ವಿಕೆಟ್ ಕಳೆದುಕೊಂಡ ಪ್ರವಾಸಿಗರು ದಿನದಂತ್ಯಕ್ಕೆ ವಿಕೆಟ್ 4 ನಷ್ಟಕ್ಕೆ 299 ರನ್ ಗಳಿಸಿದರು. ಇದರೊಂದಿಗೆ  800 ನೇ ಟೆಸ್ಟ್ ಪಂದ್ಯವಾಡುತ್ತಿರುವ ಆಸೀಸ್ ದೊಡ್ಡ ಮೊತ್ತದ ಸೂಚನೆ ನೀಡಿದೆ.

ಮೂರನೇ ಕ್ರಮಾಂಕದಲ್ಲಿ ಬಂದ ಸ್ಟೀವ್ ಸ್ಮಿತ್ ಬಂಡೆಯಂತೆ ನಿಂತು ಆಡಿದರೆ, ನಾಲ್ಕನೆಯ ವಿಕೆಟ್ ಬಿದ್ದ ನಂತರ ಜತೆಯಾದ ಗ್ಲೆನ್ ಮ್ಯಾಕ್ಸ್ ವೆಲ್ ಅವರಿಗಿಂತ ವೇಗವಾಗಿ ರನ್ (82) ಸಂಪಾದಿಸಿದರು. ಮೊನ್ನೆಯಷ್ಟೇ ಐಪಿಎಲ್  ನ ಪಂಜಾಬ್ ತಂಡದ ನಾಯಕನಾಗಿ ಆಯ್ಕೆಯಾದ ಸಂಭ್ರಮವನ್ನು ಮ್ಯಾಕ್ಸ್ ವೆಲ್ ಭರ್ಜರಿಯಾಗಿ ಆಚರಿಸಿಕೊಂಡರು.

ಇದರ ನಡುವೆ  ಈ ಸರಣಿಯಲ್ಲಿ ಎರಡನೇ ಶತಕ ದಾಖಲಿಸಿದ ನಾಯಕ ಸ್ಟೀವ್ ಸ್ಮಿತ್ ಭಾರತದ ನೆಲದಲ್ಲಿ ಒಂದೇ ಸರಣಿಯಲ್ಲಿ ಎರಡು ಶತಕದ ಗಳಿಸಿದ ವಿಶ್ವದ ಮೂರನೇ ಆಟಗಾರನೆಂಬ ಗೌರವಕ್ಕೆ ಪಾತ್ರರಾದರು.  ತಾಳ್ಮೆಯ ಆಟವಾಡಿದ ಸ್ಮಿತ್ 117  ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

 ಈ ಜೋಡಿಯನ್ನು ಬೇರ್ಪಡಿಸಲು ಶತಪ್ರಯತ್ನ ನಡೆಸಿದ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ಮುರಳಿ ವಿಜಯ್ ರನ್ನೂ ಬೌಲಿಂಗ್ ಗೆ ಇಳಿಸಿತು. ಜಡೇಜಾ ಬರೋಬ್ಬರಿ 30 ಓವರ್ ಎಸೆದರೂ,  ದಕ್ಕಿದ್ದು ಕೇವಲ  ಒಂದು ವಿಕೆಟ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೈದಾನದಿಂದ ಹೊರಬಿದ್ದ ವಿರಾಟ್ ಕೊಹ್ಲಿ