ರಾಂಚಿ: ರಾಹುಲ್ ದ್ರಾವಿಡ್ ಕೂಡಾ ಹೀಗೇ. ಟೆಸ್ಟ್ ಕ್ರಿಕೆಟ್ ನಲ್ಲಿ ಅವರು ಕ್ರೀಸ್ ಗೆ ತಳವೂರಿ ನಿಂತರೆ ಜಪ್ಪಯ್ಯ ಎಂದರೂ ಅವರನ್ನು ಅಲುಗಾಡಿಸಲಾಗದು. ಈಗ ಚೇತೇಶ್ವರ ಪೂಜಾರ ರೂಪದಲ್ಲಿ ಮತ್ತೊಮ್ಮೆ ಟೀಂ ಇಂಡಿಯಾಕ್ಕೆ ದ್ರಾವಿಡ್ ಎಂಟ್ರಿಯಾಗಿದ್ದಾರೆ.
ವಿಶೇಷವೆಂದರೆ ಪೂಜಾರ ಕೂಡಾ ದ್ರಾವಿಡ್ ಕ್ರಮಾಂಕದಲ್ಲೇ ಬ್ಯಾಟಿಂಗ್ ಮಾಡುತ್ತಾರೆ. ಕಳೆದ ಪಂದ್ಯದಲ್ಲೂ ಪೂಜಾರನೇ ಭಾರತಕ್ಕೆ ಆಸರೆಯಾಗಿದ್ದು. ಈಗಲೂ ಹಾಗೆಯೇ. ನಾಲ್ಕನೇ ದಿನ ಮೊದಲ ಅವಧಿಯಲ್ಲಿ ವಿಕೆಟ್ ಕಳೆದುಕೊಳ್ಳದೇ ಭಾರತ 400 ರ ಗಡಿ ದಾಟಿದೆ. ಭೋಜನ ವಿರಾಮದ ವೇಳೆಗೆ 6 ವಿಕೆಟ್ ನಷ್ಟಕ್ಕೆ 436 ರನ್ ಗಳಿಸಿದೆ.
ಪೂಜಾರ ಬರೋಬ್ಬರಿ 434 ಎಸೆತ ಎದುರಿಸಿ 164 ರನ್ ಗಳಿಸಿದ್ದಾರೆ. ವೃದ್ಧಿಮಾನ್ ಸಹಾ 59 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕೇವಲ 16 ರನ್ ಗಳಿಸಿದರೆ ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ ಮೊತ್ತ ದಾಟಬಹುದು.
ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದ ಪೂಜಾರನೇ ಭಾರತಕ್ಕೆ ಕೊನೆಯವರೆಗೆ ಆಸರೆ. ಎಷ್ಟು ಸಾಧ್ಯವೋ ಅಷ್ಟು ಮುನ್ನಡೆ ಸಾಧಿಸಲು ಸಾಧ್ಯವಾದರೆ ಭಾರತಕ್ಕೆ ಪ್ಲಸ್ ಪಾಯಿಂಟ್.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ