ನಂ.1 ಆಗಿ ವರ್ಷಾಂತ್ಯಗೊಳಿಸಿದ ವಿರಾಟ್ ಕೊಹ್ಲಿ ಪಡೆ

ಬುಧವಾರ, 21 ಡಿಸೆಂಬರ್ 2016 (09:56 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು 4-0 ಅಂತರದಿಂದ ಗೆಲ್ಲುವುದರೊಂದಿಗೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಆಗಿ ವರ್ಷಾಂತ್ಯ ಮಾಡಿದೆ.

ನಿನ್ನೆಯ ಸರಣಿ ಗೆಲುವಿನಿಂದ ಐದು ಹೆಚ್ಚುವರಿ ಅಂಕ ಗಳಿಸಿರುವ ನಂ.1 ಟೆಸ್ಟ್ ತಂಡ ಟೀಂ ಇಂಡಿಯಾ, ಒಟ್ಟಾರೆ 120 ಅಂಕಗಳನ್ನು ಗಳಿಸಿಕೊಂಡಿದೆ. ಇದರೊಂದಿಗೆ ದ್ವಿತೀಯ ಸ್ಥಾನಿ ಆಸ್ಟ್ರೇಲಿಯಾಗಿಂತ 15 ಅಂಕ ಹೆಚ್ಚು ಗಳಿಸಿದೆ.

ಇದೇ ವೇಳೆ ಇಂಗ್ಲೆಂಡ್ ಮೂರು ಸ್ಥಾನ ಕೆಳಕ್ಕೆ ಜಾರಿದ್ದು, ಎರಡರಿಂದ ಐದನೇ ಸ್ಥಾನಕ್ಕೆ ಕುಸಿದಿದೆ. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ದ. ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳಿವೆ.  ಏಪ್ರಿಲ್ 2017 ರವರೆಗೆ ಅಗ್ರ ಸ್ಥಾನ ಕಾಯ್ದುಕೊಳ್ಳುವ ತಂಡ ಐಸಿಸಿ ವತಿಯಿಂದ 1 ಮಿಲಿಯನ್ ಡಾಲರ್ ಬಹುಮಾನ ಪಡೆಯಲಿದೆ. ಅಕ್ಟೋಬರ್ 11 ರಿಂದ ಭಾರತ ನಂ.1 ಸ್ಥಾನದಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಾರ್ಟಿನಾ ಹಿಂಗಿಸ್ ಜತೆಗಿನ ವಿರಸ ರಹಸ್ಯವೇನೂ ಅಲ್ಲ ಎಂದ ಸಾನಿಯಾ ಮಿರ್ಜಾ