ಟೀಂ ಇಂಡಿಯಾ ಕ್ರಿಕೆಟಿಗರ ಊಟದ ಬಿಲ್ ಪಾವತಿಸಿದೆ ಎಂದ ಅಭಿಮಾನಿ!

Webdunia
ಶನಿವಾರ, 2 ಜನವರಿ 2021 (10:11 IST)
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರ ಮೇಲಿನ ಅಭಿಮಾನದಿಂದ ಅವರು ಹೋಟೆಲ್ ನಲ್ಲಿ ಊಟ ಮಾಡಿದ ಬಿಲ್ ಅವರಿಗೇ ಅರಿವಿಲ್ಲದಂತೇ ಪಾವತಿಸಿದೆ ಎಂದು ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.


ಇದಕ್ಕೆ ಪುರಾವೆಯಾಗಿ ಅವರು ಪಾವತಿಸಿದ ಬಿಲ್ ಹಾಗೂ ಪಕ್ಕದ ಟೇಬಲ್ ನಲ್ಲಿದ್ದ ಟೀಂ ಇಂಡಿಯಾ ಕ್ರಿಕೆಟಿಗರ ವಿಡಿಯೋವನ್ನೂ ಫೋಟೋ ಸಮೇತ ಪ್ರಕಟಿಸಿದ್ದಾರೆ. ಆದರೆ ನವಲ್ದೀಪ್ ಸಿಂಗ್ ಎಂಬ ಈ ಅಭಿಮಾನಿ ತಮ್ಮ ಫೋಟೋವನ್ನು ಮಾತ್ರ ಎಲ್ಲೂ ಪ್ರಕಟಿಸಿಲ್ಲ. ತಾನು ಹೋದ ರೆಸ್ಟೋರೆಂಟ್ ನಲ್ಲಿ ಪಕ್ಕದ ಟೇಬಲ್ ನಲ್ಲೇ ಭಾರತೀಯ ಕ್ರಿಕೆಟಿಗರಾದ ರೋಹಿತ್ ಶರ್ಮಾ, ರಿಷಬ್ ಪಂತ್, ಶಬ್ನಂ ಗಿಲ್, ನವದೀಪ್ ಸೈನಿ ಊಟ ಮಾಡುತ್ತಿದ್ದರು. ಅವರನ್ನು ನೋಡುತ್ತಾ ಕೆಲವು ಕಾಲ ಇರಬೇಕೆಂದು ಹಸಿವಿಲ್ಲದಿದ್ದರೂ ಎಕ್ಸ್ ಟ್ರಾ ಊಟ ಆರ್ಡರ್ ಮಾಡಿ ನೋಡುತ್ತಾ ನಿಂತಿದ್ದೆ. ಬಳಿಕ ನನ್ನ ಬಿಲ್ ಜೊತೆಗೆ ಅವರ ಬಿಲ್ ನ್ನೂ ಅವರಿಗೆ ಗೊತ್ತಾಗದಂತೆ ಪಾವತಿಸಿದೆ. ಅದು ಗೊತ್ತಾದಾಗ ನನ್ನ ಬಳಿಗೆ ಬಂದ ರೋಹಿತ್ ಶರ್ಮಾ ‘ಹೀಗೆಲ್ಲಾ ಮಾಡಬೇಡಿ. ಚೆನ್ನಾಗಿರಲ್ಲ’ ಎಂದರು.

‘ನೀವು ನಮ್ಮ ಹೀರೋ. ನಿಮಗಾಗಿ ನಾನು ಮಾಡಿದ್ದು ಸಣ್ಣ ಸೇವೆಯಷ್ಟೇ’ ಎಂದೆ. ಅದಕ್ಕೆ ರಿಷಬ್ ಪಂತ್ ಕೂಡಾ ‘ದುಡ್ಡು ತೆಗೆದುಕೊಳ್ಳಿ. ದುಡ್ಡು ತೆಗೆದುಕೊಳ್ಳದೇ ಸೆಲ್ಫೀ ಕೊಡಲ್ಲ’ ಎಂದರು. ನಾನು ಒಪ್ಪಲಿಲ್ಲ. ಕೊನೆಗೆ ಅವರು ನನ್ನ ಪತ್ನಿ ಬಳಿ ‘ಅತ್ತಿಗೆ, ಊಟಕ್ಕೆ ಧನ್ಯವಾದ’ ಎಂದರು. ಕೊನೆಗೂ ನಮ್ಮ ಜೊತೆಗೆ ಫೋಟೋ ತೆಗೆಸಿಕೊಂಡರು’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಮೃತಿ ಮಂಧಾನ, ಪಾಲಾಶ್ ಮದುವೆ ನಡೆಯುತ್ತಾ: ಬಿಗ್ ಅಪ್ ಡೇಟ್ ಕೊಟ್ಟ ಪಾಲಾಶ್ ತಾಯಿ

ಗೆಳೆತನ ಅಂದ್ರೆ ಹೀಗಿರಬೇಕು: ಸ್ಮೃತಿ ಮಂಧಾನಗಾಗಿ ದೊಡ್ಡ ನಿರ್ಧಾರ ಕೈಗೊಂಡ ಜೆಮಿಮಾ ರೊಡ್ರಿಗಸ್

ಧೋನಿ ಮನೆಯಲ್ಲಿ ಪಾರ್ಟಿ, ಆದ್ರೆ ಎಲ್ಲರಿಗಿಲ್ಲ ಆಹ್ವಾನ: ಕೊಹ್ಲಿಗೆ ಧೋನಿಯಿಂದ ಸ್ಪೆಷಲ್ ಟ್ರೀಟ್ಮೆಂಟ್

IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಏಕದಿನ ಯಾವಾಗ, ಎಲ್ಲಿ ಇಲ್ಲಿದೆ ವಿವರ

ಕ್ಯಾಪ್ಟನ್ ಜೊತೆ ಹೊಂದಾಣಿಕೆಯಾಗ್ತಿಲ್ಲ ಎಂದಾಕ್ಷಣ ಕೋಚ್ ಹುದ್ದೆ ಬಿಟ್ಟಿದ್ದ ಅನಿಲ್ ಕುಂಬ್ಳೆ: ಆದ್ರೆ ಗಂಭೀರ್...

ಮುಂದಿನ ಸುದ್ದಿ
Show comments