ಟೀಂ ಇಂಡಿಯಾ ಕರ್ತವ್ಯಕ್ಕೆ ಬ್ರೇಕ್ ಹಾಕಿ ಮದುವೆಯಾದ ಕ್ರಿಕೆಟಿಗ ಮುಕೇಶ್ ಕುಮಾರ್

Webdunia
ಬುಧವಾರ, 29 ನವೆಂಬರ್ 2023 (17:10 IST)
Photo Courtesy: Twitter
ಲಕ್ನೋ: ಆಸ್ಟ್ರೇಲಿಯಾ ಸರಣಿಯ ಭಾಗವಾಗಿದ್ದ ಟೀಂ ಇಂಡಿಯಾ ವೇಗಿ ಮುಕೇಶ್ ಕುಮಾರ್ ತಮ್ಮ ಬಾಲ್ಯದ ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಉತ್ತರ ಪ್ರದೇಶ ಮೂಲದ ವೇಗಿ ಮುಕೇಶ್ ಕುಮಾರ್ ಆಸ್ಟ್ರೇಲಿಯಾ ವಿರುದ್ಧ ಮೊದಲ ಎರಡು ಟಿ20 ಪಂದ್ಯಗಳಲ್ಲಿ ಆಡಿದ್ದರು. ಮೂರನೇ ಟಿ20 ಪಂದ್ಯದ ವೇಳೆಗೆ ಮದುವೆ ನಿಮಿತ್ತ ಬ್ರೇಕ್ ಪಡೆದಿದ್ದರು.

ಇಂದು ತಮ್ಮ ಬಾಲ್ಯದ ಗೆಳತಿ ದಿವ್ಯಾ ಸಿಂಗ್ ಜೊತೆ ಮುಕೇಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಿನ್ನೆ ರಾತ್ರಿ ಗೋರಖ್ ಪುರದಲ್ಲಿ ಇಬ್ಬರ ವಿವಾಹ ಆರತಕ್ಷತೆ ನೆರವೇರಿತ್ತು. ಇವರಿಬ್ಬರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಡಿಸೆಂಬರ್ 1 ರಂದು ನಡೆಯಲಿರುವ ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟಿ20 ವೇಳೆ ಅವರು ಮತ್ತೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಈ ಸರಣಿ ಮುಕ್ತಾಯವಾದದ ಮೇಲೆ ಅಂದರೆ ಡಿಸೆಂಬರ್ 4 ರಂದು ಮತ್ತೊಂದು ವಿವಾಹ ಆರತಕ್ಷತೆ ನಡೆಯಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪ್ರಸಿದ್ಧ ಕೃಷ್ಣರಿಂದಾಗಿ ರಣಜಿ ಸೆಮಿಫೈನಲ್ ನಲ್ಲಿ ಕೆಎಲ್ ರಾಹುಲ್ ಗೆ ಈ ಗತಿ ಬಂತು

T20 WC 2026: ಟೀಂ ಇಂಡಿಯಾ ಸೂಪರ್ 8 ಹಂತದ ವೇಳಾಪಟ್ಟಿ, ಎದುರಾಳಿಯ ಸಂಪೂರ್ಣ ಮಾಹಿತಿ ಇಲ್ಲಿದೆ

ಅಭಿಷೇಕ್ ಶರ್ಮಾ ಹ್ಯಾಟ್ರಿಕ್‌ ಡಕ್‌ ಔಟ್‌: ಅನಗತ್ಯ ದಾಖಲೆ ಮಾಡಿದ ವಿಶ್ವನ ನಂಬರ್‌ ಒನ್‌ ಬ್ಯಾಟರ್‌

T20 World Cup: ನಮೀಬಿಯಾವನ್ನು ಮಣಿಸಿದ ಸೂಪರ್‌ 8 ಸುತ್ತಿಗೆ ಲಗ್ಗೆ ಹಾಕಿದ ಪಾಕಿಸ್ತಾನ

T20 WC: ಡಚ್ಚರ ವಿರುದ್ಧ ಟಾಸ್‌ ಗೆದ್ದ ಸೂರ್ಯಕುಮಾರ್‌: ಭಾರತ ತಂಡದಲ್ಲಿ ಮಹತ್ವದ ಬದಲಾವಣೆ

ಮುಂದಿನ ಸುದ್ದಿ
Show comments