Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಕೋಚ್ ಆಯ್ಕೆ ಪ್ರಕ್ರಿಯೆ ಇನ್ನಷ್ಟು ವಿಳಂಬ

ಟೀಂ ಇಂಡಿಯಾ ಕೋಚ್ ಆಯ್ಕೆ ಪ್ರಕ್ರಿಯೆ ಇನ್ನಷ್ಟು ವಿಳಂಬ
ಮುಂಬೈ , ಗುರುವಾರ, 1 ಆಗಸ್ಟ್ 2019 (09:19 IST)
ಮುಂಬೈ: ಟೀಂ ಇಂಡಿಯಾ ಮುಂದಿನ ಕೋಚ್ ಆಯ್ಕೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಇದಕ್ಕೆ ಕಾರಣ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದವರ ಸ್ವತ ಹಿತಾಸಕ್ತಿ ಹುದ್ದೆಗಳು!


ಟೀಂ ಇಂಡಿಯಾ ಕೋಚ್ ಹುದ್ದೆಗೆ ಹಾಲಿ ಕೋಚ್ ರವಿಶಾಸ್ತ್ರಿ ಹೊರತಾಗಿ ಟಾಮ್ ಮೂಡಿ, ರಾಬಿನ್ ಸಿಂಗ್, ಮಹೆಲಾ ಜಯವರ್ಧನೆ ಸೇರಿದಂತೆ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಇವರೆಲ್ಲರೂ ಒಂದಲ್ಲಾ  ಒಂದು ಲಾಭದಾಯಕ ಹುದ್ದೆಯಲ್ಲಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಕೋಚ್‍ ಆದವರು ಲಾಭದಾಯಕ ಹುದ್ದೆಯಲ್ಲಿರುವಂತಿಲ್ಲ.

ಹೀಗಾಗಿ ಕೋಚ್ ಆಯ್ಕೆ ಮಾಡುವ ಸಿಎಸಿ ಮಂಡಳಿ ಮೊದಲು ಅರ್ಜಿ ಸಲ್ಲಿಸಿದವರ ಈ ವಿಚಾರವನ್ನು ಇತ್ಯರ್ಥಗೊಳಿಸಬೇಕಿದೆ. ಬಳಿಕವಷ್ಟೇ ಇವರಲ್ಲಿ ಕೋಚ್ ಯಾರಾಗಬಹುದು ಎಂದು ಆಯ್ಕೆ ಪ್ರಕ್ರಿಯೆ ನಡೆಸಬೇಕಿದೆ. ಹೀಗಾಗಿ ವಿಳಂಬವಾಗಲಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ಯುವತಿಯನ್ನು ವಿವಾಹವಾಗಲಿರುವ ಪಾಕ್ ಕ್ರಿಕೆಟಿಗ ಹಸನ್ ಅಲಿ