ಮೊಹಾಲಿ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯವನ್ನು ವಿಕೆಟ್ ಗಳಿಂದ ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 2-0 ರಿಂದ ಮುನ್ನಡೆ ಸಾಧಿಸಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಉಳಿದೆರಡು ಪಂದ್ಯ ಸೋತರೂ ಟೀಂ ಇಂಡಿಯಾ ಸರಣಿ ಸೋಲಲು ಸಾಧ್ಯವಿಲ್ಲ.
ಮೂರು ವರ್ಷಗಳ ಬಳಿಕೆ ಟೀಂ ಇಂಡಿಯಾಕ್ಕೆ ಮರಳಿದ ಪಾರ್ಥಿವ್ ಪಟೇಲ್ ಗೆ ಇದು ಅದೃಷ್ಟದ ಮೈದಾನ ಎಂಬುದನ್ನು ಅವರು ಮತ್ತೊಮ್ಮೆ ಸಾಬೀತು ಪಡಿಸಿದರು. ಐಪಿಎಲ್ ನಲ್ಲಿ ಅವರು ಎಲ್ಲಾ ಗರಿಷ್ಠ ಸ್ಕೋರ್ ಮಾಡಿದ್ದು ಇದೇ ಮೈದಾನದಲ್ಲಿ. ಇಂದೂ ಕೂಡಾ ಗೆಲುವಿಗೆ 103 ರನ್ ಗಳನ್ನು ಬೆನ್ನತ್ತಿದಾಗ ಆರಂಭದಲ್ಲೇ ಮುರಳಿ ವಿಜಯ್ ಶೂನ್ಯಕ್ಕೆ ಔಟಾಗಿದ್ದರು. ಆಗ ಚೇತೇಶ್ವರ ಪೂಜಾರ () ಜತೆ ಸೇರಿಕೊಂಡು ಬಿರುಸಿನ ಆಟಕ್ಕೆ ಕೈ ಹಾಕಿದರು.
ಈ ನಡುವೆ 15 ರನ್ ಗಳಿಸಿ ಪೂಜಾರ ಔಟಾದರು. ಕೊನೆಗೂ ಭಾರತವನ್ನು ಗೆಲುವಿನ ದಡ ಮುಟ್ಟಿಸಲು ಫಿನಿಶರ್ ವಿರಾಟ್ ಕೊಹ್ಲಿಯೇ ಮೈದಾನಕ್ಕಿಳಿಯಬೇಕಾಯಿತು. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿದ ರವೀಂದ್ರ ಜಡೇಜಾ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ