Select Your Language

Notifications

webdunia
webdunia
webdunia
webdunia

ಅಬ್ಬಾ ನಿಜಕ್ಕೂ ಮೆಚ್ಚಬೇಕು ಈ ಆಟಗಾರನ ತಾಳ್ಮೆಗೆ!

ಅಬ್ಬಾ ನಿಜಕ್ಕೂ ಮೆಚ್ಚಬೇಕು ಈ ಆಟಗಾರನ ತಾಳ್ಮೆಗೆ!
Mohaali , ಮಂಗಳವಾರ, 29 ನವೆಂಬರ್ 2016 (14:03 IST)
ಮೊಹಾಲಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 236 ಕ್ಕೆ ಆಲೌಟ್ ಆಗಿದ್ದುಗೆಲುವಿಗೆ 103 ರನ್ ಗಳ ಗುರಿ ನಿಗದಿಪಡಿಸಿದೆ. ಆದರೆ ಇಷ್ಟಾದರೂ ಮುನ್ನಡೆ ಪಡೆಯಲು ಕಾರಣ ಆ ಆಟಗಾರನ ತಾಳ್ಮೆ.

ಅವರು ಇಂಗ್ಲೆಂಡ್ ನ ಆರಂಭಿಕ ಹಸೀಬ್ ಹಮೀದ್. ನಿನ್ನೆ ಕೈ ಬೆರಳಿಗೆ ಗಾಯಗೊಂಡಿದ್ದ ಕಾರಣ ಇಂಗ್ಲೆಂಡ್ ಇನಿಂಗ್ಸ್ ಆರಂಭಿಸಲು ಕಣಕ್ಕಿಳಿದಿರಲಿಲ್ಲ. ಆದರೆ ಇಂದು ವಿಕೆಟ್ ಗಳು ತರಗೆಲೆಯಂತೆ ಧರೆಗುಳುತ್ತಿರುವಾಗ ತಂಡ ಇನಿಂಗ್ಸ್ ಸೋಲಿನ ಭೀತಿಯಲ್ಲಿರುವಾಗ ಸುಮ್ಮನಿರಲು ಸಾಧ್ಯವೇ?

ಹಾಗಾಗಿ ಇಂದು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದರು. ಅದೂ ಎಂಟನೇ ಕ್ರಮಾಂಕದಲ್ಲಿ. ಕೈ ಬೆರಳಗೆ ದಪ್ಪ ಬ್ಯಾಂಡೇಜು ಮಾಡಿಕೊಂಡಿದ್ದ ಹಸೀಬ್ ಆರಂಭದಲ್ಲಿ ಸುಮ್ಮನೇ ಡಿಫೆನ್ಸಿವ್ ಶಾಟ್ ಆಡುತ್ತಿದ್ದರು.  ಹೊಡೆತಗಳಿಗೆ ಕೈ ಹಾಕದೇ ವಿಕೆಟ್ ಕಳೆದುಕೊಳ್ಳದಂತೆ ನೋಡಿಕೊಂಡರು. ಆದರೆ ಆ ತುದಿಯಲ್ಲಿರುವ ಬ್ಯಾಟ್ಸ್ ಮನ್ ಗಳು ನಿಲ್ಲಲೇ ಇಲ್ಲ. ಮುನ್ನಡೆಯ ಅಂತರ ಇನ್ನೂ 50 ದಾಟಿರಲಿಲ್ಲ.

ಹೀಗಾಗಿ ನೋವು ಮರೆತು ಹೊಡೆತಗಳಿಗೆ ಕೈ ಹಾಕಿದರು. ನೋಡು ನೋಡುತ್ತಲೇ 59 ರನ್ ಹೊಡೆದೇ ಬಿಟ್ಟರು. ಇದಕ್ಕೆ ಬರೋಬ್ಬರಿ 156 ಎಸೆತಗಳನ್ನು ಎದರುಸಿದರು. ಅಂತೂ ಇಂಗ್ಲೆಂಡ್ ಹೀನಾಯ ಸೋಲು ಕಾಣುವುದನ್ನು ತಪ್ಪಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯುವರಾಜ್ ಸಿಂಗ್ ಜತೆ ಸಂಗೀತ್ ಕಾರ್ಯಕ್ರಮದಲ್ಲಿ ಇವರು ನರ್ತಿಸಬೇಕಂತೆ!