Select Your Language

Notifications

webdunia
webdunia
webdunia
webdunia

ಚೆನ್ನೈ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಮಾಡಬಹುದಾದ ದಾಖಲೆಗಳಿವು

ವಿರಾಟ್ ಕೊಹ್ಲಿ
Chennai , ಗುರುವಾರ, 15 ಡಿಸೆಂಬರ್ 2016 (13:57 IST)
ಚೆನ್ನೈ: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಈಗಾಗಲೇ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಗೆದ್ದಾಗಿದೆ. ಇನ್ನೊಂದು ಪಂದ್ಯ ಬಾಕಿ ಉಳಿದಿದ್ದು, ಅದರ ಫಲಿತಾಂಶ ಸರಣಿಯ ಮೇಲೆ ಏನೂ ಪರಿಣಾಮ ಬೀರದು. ಆದರೆ ಭಾರತಕ್ಕೆ ಕೆಲವೊಂದು ದಾಖಲೆ ಮಾಡುವ ಅವಕಾಶವಿದೆ.

ಇದುವರೆಗೆ ಭಾರತ ಸತತವಾಗಿ 18 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಈ ಸಮಯದಲ್ಲಿ ಒಂದೂ ಸೋಲು ಕಂಡಿಲ್ಲ. ನಾಳಿನ ಪಂದ್ಯದಲ್ಲಿ ಆ ದಾಖಲೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಬಹುದು.  ವಾರ್ಧಾ ಚಂಮಾರುತದಿಂದಾಗಿ ಮೈದಾನ ಒದ್ದೆಯಾಗಿದ್ದರೆ, ಪಿಚ್ ಹೇಗೆ ವರ್ತಿಸಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದರೂ ಮಿಡ್ ಪಿಚ್, ಔಟ್ ಫೀಲ್ಡ್ ಗೆ ತೊಂಡದರೆಯಾಗದಂತೆ ಕಾರ್ಮಿಕರು ಸಾಕಷ್ಟು ಶ್ರಮವಹಿಸಿದ್ದಾರೆ.

ಇಲ್ಲಿಯೇ ಸೆಹ್ವಾಗ್ ಟೆಸ್ಟ್ ನಲ್ಲಿ ಎರಡನೇ ತ್ರಿಶತಕ ಗಳಿಸಿದ್ದು. ಟೆಸ್ಟ್ ಕ್ರಿಕೆಟ್ ನ ಟೈ ಆದ ಪಂದ್ಯ ನಡೆದಿದ್ದೂ ಇಲ್ಲಿಯೇ. ಹಾಗಾಗಿ ಅಪರೂಪದ ದಾಖಲೆಗಳಿಗೆ ಪಾತ್ರವಾದ ಮೈದಾನವಿದು. ವಿಶೇಷವೆಂದರೆ ಸರಣಿಯಲ್ಲಿ ಪ್ರತೀ ಪಂದ್ಯದಲ್ಲಿ ಐದು ವಿಕೆಟ್ ಗಳ ಗೊಂಚಲು ಪಡೆದ ರವಿಚಂದ್ರನ್ ಅಶ್ವಿನ್ ಮತ್ತು ಕಳೆದ ಪಂದ್ಯದ ಶತಕಧಾರಿ ಮುರಳಿ ವಿಜಯ್ ತವರೂರು.

ಭಾರತ ನಾಳಿನ ಪಂದ್ಯವನ್ನು ಗೆದ್ದರೆ ಸರಣಿಯನ್ನು 4-0 ಅಂತರದಿಂದ ಗೆದ್ದಂತಾಗುತ್ತದೆ. ಇದರಿಂದ 1992-93 ರಲ್ಲಿ ಮೊಹಮ್ಮದ್ ಅಜರುದ್ದೀನ್ ನೇತೃತ್ವದಲ್ಲಿ 3-0 ಅಂತರದಿಂದ ಸೋಲಿಸಿದ ದಾಖಲೆ ಅಳಿಸಿ ಹೋಗುತ್ತದೆ. ಇನ್ನು ವಿರಾಟ್ ಕೊಹ್ಲಿ ಇನ್ನೊಂದು ದ್ವಿಶತಕ ಗಳಿಸಿದರೆ, ಒಂದೇ ವರ್ಷ ನಾಲ್ಕು ದ್ವಿಶತಕ ಗಳಿಸಿದ ವಿಶೇಷ ದಾಖಲೆ ಮಾಡಲಿದ್ದಾರೆ. ಅಲ್ಲದೆ ಇನ್ನೂ 135 ರನ್ ಗಳಿಸಿದರೆ ಒಂದೇ ಸರಣಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಸುನಿಲ್ ಗವಾಸ್ಕರ್ (774) ದಾಖಲೆಯನ್ನು ಮುರಿಯಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಜತೆ ಕ್ರಿಕೆಟಿಗ ರೋಹಿತ್ ಶರ್ಮಾ ಟ್ವಿಟರ್ ನಲ್ಲೇ ರೊಮ್ಯಾನ್ಸ್