Select Your Language

Notifications

webdunia
webdunia
webdunia
webdunia

ಪದಚ್ಯುತ ಅಧ್ಯಕ್ಷ ಅನುರಾಗ್ ಠಾಕೂರ್ ಗೆ ರಹಸ್ಯ ಸಂದೇಶ ಕೊಡುತ್ತಿರುವ ಟೀಂ ಇಂಡಿಯಾದ ಇವರು ಯಾರು ಬಲ್ಲಿರಾ?

ಪದಚ್ಯುತ ಅಧ್ಯಕ್ಷ  ಅನುರಾಗ್ ಠಾಕೂರ್ ಗೆ ರಹಸ್ಯ ಸಂದೇಶ ಕೊಡುತ್ತಿರುವ ಟೀಂ ಇಂಡಿಯಾದ ಇವರು ಯಾರು ಬಲ್ಲಿರಾ?
Mumbai , ಸೋಮವಾರ, 6 ಫೆಬ್ರವರಿ 2017 (09:00 IST)
ಮುಂಬೈ: ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಂಡರೂ ಅನುರಾಗ್ ಠಾಕೂರ್ ಈಗಲೂ ಭಾರತ ಕ್ರಿಕೆಟ್ ನ ಆಗುಹೋಗುಗಳನ್ನು ವ್ಯವಸ್ಥಿತವಾಗಿ ತಿಳಿಯುತ್ತಿದ್ದಾರಂತೆ. ಯಾಕೆಂದರೆ ಟೀಂ ಇಂಡಿಯಾದಲ್ಲಿ ಒಬ್ಬರು ರಹಸ್ಯ ಮಾಹಿತಿದಾರರಿದ್ದಾರೆಂಬ ವಿಚಾರ ಬೆಳಕಿಗೆ ಬಂದಿದೆ.

 
ಟೀಂ ಇಂಡಿಯಾ ಮಾಧ್ಯಮ ವ್ಯವಸ್ಥಾಪಕ ನಿಶಾಂತ್ ಅರೋರಾ ಅವರೇ ಈ ರಹಸ್ಯ ಮಾಹಿತಿದಾರ. ಈ ಬಗ್ಗೆ ಟೀಂ ಇಂಡಿಯಾದ ಹಿರಿಯ ಆಟಗಾರರಿಬ್ಬರೇ ಬಿಸಿಸಿಐಗೆ ದೂರು ನೀಡಿದ್ದಾರೆಂದು ವರದಿಯಾಗಿದೆ.

ಈ ವ್ಯಕ್ತಿ ಮಾಧ್ಯಮಗಳೊಂದಿಗೆ ಆಟಗಾರರ ಸಂವಹನ ಸುಲಭಗೊಳಿಸಲು ಇದ್ದಾರೆಯೇ ಅಥವಾ ಕಿರಿ ಕಿರಿ ಉಂಟು ಮಾಡಲು ನೇಮಿಸಲಾಗಿದೆಯೇ? ಯಾಕೆಂದರೆ ಭಾರತ ಡ್ರೆಸ್ಸಿಂಗ್ ರೂಂನಲ್ಲಿ ನಡೆಯುವ ಎಲ್ಲಾ ವಿಚಾರಗಳು, ಟೀಂ ಇಂಡಿಯಾದ ಆಡುವ ಅಂತಿಮ ಬಳಗ ಎಲ್ಲಾ ಮಾಹಿತಿಗಳೂ ಸೋರಿಕೆಯಾಗುತ್ತಿವೆ ಎಂದು ಹಿರಿಯ ಆಟಗಾರರು ದೂರಿದ್ದಾರೆನ್ನಲಾಗಿದೆ.

ಅರೋರಾ ಈಗಲೂ ಅನುರಾಗ್ ಠಾಕೂರ್ ಅವರ ವೈಯಕ್ತಿಕ ಸಾಮಾಜಿಕ ಜಾಲತಾಣವನ್ನು ನಿಭಾಯಿಸುತ್ತಿದ್ದಾರೆನ್ನಲಾಗಿದೆ. ಅವರೇ ತಮ್ಮ ಮಾಜಿ ಬಾಸ್ ಗೆ ರಹಸ್ಯ ವಿವರ ನೀಡುತ್ತಿದ್ದಾರೆ ಎಂಬುದು ಆರೋಪ. ಆದರೆ ಅರೋರಾ ಮಾತ್ರ ಇದನ್ನು ಅಲ್ಲಗಳೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರಿನಲ್ಲಿ ಕ್ರಿಸ್ ಗೇಲ್: ಮುಗಿಬಿದ್ದ ಜನಸಾಗರ