TATA IPL 2025:ಸೋಲಿನ ನೋವಿನಲ್ಲಿದ್ದ ಆರ್‌ಸಿಬಿ ಅಭಿಮಾನಿಗಳಿಗೆ Good News,ಬಂದ್ಬಿಟ್ಟ ಭರವಸೆಯ ಬೌಲರ್‌

Sampriya
ಭಾನುವಾರ, 25 ಮೇ 2025 (11:48 IST)
Photo Credit X
ಭಾರತೀಯ ಪ್ರೀಮಿಯರ್ ಲೀಗ್‌ 2025ರ ಆವೃತ್ತಿಯಲ್ಲಿ ಆಡಿದ ಕೇವಲ ಹತ್ತು ಪಂದ್ಯಗಳಲ್ಲಿ 18 ವಿಕೆಟ್‌ಗಳೊಂದಿಗೆ RCB ಯ ಅತಿ ಹೆಚ್ಚು ವಿಕೆಟ್ ಪಡೆದ  ಹ್ಯಾಜಲ್‌ವುಡ್‌ ಇದೀಗ ಮತ್ತೇ ವಾಪಾಸ್ಸಾಗಿದ್ದಾರೆ.

ಈ ಮೂಲಕ ಆರ್‌ಸಿಬಿಗೆ ಹೊಸ ಬಲ ಸಿಕ್ಕಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿಯಾಚೆಗಿನ ಉದ್ವಿಗ್ನತೆಯ ನಂತರ IPL ತಾತ್ಕಾಲಿಕವಾಗಿ ಸ್ಥಗಿತಗೊಂಡಾಗ ಅವರು ಆಸ್ಟ್ರೇಲಿಯಾಕ್ಕೆ ಮರಳಿದರು.

ಮನೆಯಲ್ಲಿ ಸ್ವಲ್ಪ ರಿಲ್ಯಾಕ್ಸ್ ಆದ ಬಳಿಕ ಅವರು ಪಂದ್ಯಾಟಕ್ಕೆ ವಾಪಾಸ್ಸಾವ ಮುನ್ಸೂಚನೆಯಿತ್ತು. ಅದಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ಗಾಗಿ ಆಸ್ಟ್ರೇಲಿಯಾದ ತಯಾರಿಯ ಭಾಗವಾಗಿ ಬ್ರಿಸ್ಬೇನ್‌ನಲ್ಲಿ ತರಬೇತಿ ಪಡೆದರು.

ಈಗಾಗಲೇ ಪ್ಲೇ ಆಫ್‌ಗೆ ಪ್ರವೇಶಿಸಿರುವ ಆರ್‌ಸಿಬಿ, ಶುಕ್ರವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯಾಟದಲ್ಲಿ ಸೋಲು ಅನುಭವಿಸಿ, ಸ್ವಲ್ಪ ಹಿನ್ನಡೆ ಅನುಭವಿಸಿತು. ಇದರಿಂದ  ಐಪಿಎಲ್ ಪಾಯಿಂಟ್‌ಗಳ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯುವ ಗುರಿ ತಲುಪಲಿಲ್ಲ. ಸೋಲಿನ ನೋವಿನಲ್ಲಿದ್ದ ಆರ್‌ಸಿಬಿಗೆ ಇದೀಗ ಹ್ಯಾಜಲ್‌ವುಡ್‌ ಮರಳುವಿಕೆ ಹೊಸ ಭರವಸೆಯನ್ನು ನೀಡಿದೆ.


<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜೀಸಸ್ ಈವತ್ತು ರಜಾ ಇದ್ದ ಅನ್ಸುತ್ತೆ.. ಜೆಮಿಮಾ ರೊಡ್ರಿಗಸ್ ರನ್ನು ಹೀಗಾ ಟ್ರೋಲ್ ಮಾಡೋದು

ಗೌತಮ್ ಗಂಭೀರ್ ಗೆ ಸಾಕಾ ಇನ್ನೂ ಬೇಕಾ.. ನೆಟ್ಟಿಗರಿಂದ ತಪರಾಕಿ

ವಿಶ್ವಕಪ್ ಗೆದ್ದ ಬಳಿಕ ಜೂಲಾನ್ ಗೋಸ್ವಾಮಿಗೆ ಸ್ಮೃತಿ ಮಂಧಾನ, ಹರ್ಮನ್ ಕ್ಷಮೆ ಕೇಳಿದ್ದೇಕೆ

ಪ್ರೇಕ್ಷಕರೆಲ್ಲರೂ ಹೋದ ಮೇಲೆ ಭಾರತ ಮಹಿಳಾ ಕ್ರಿಕೆಟಿಗರ ಸೆಲೆಬ್ರೇಷನ್ ಸ್ಟೈಲೇ ಬೇರೆ: video

Video: ಮಿಥಾಲಿ ರಾಜ್ ಜೊತೆಗೆ ಹಳೆಯ ಸಿಟ್ಟಿದ್ದರೂ ಹರ್ಮನ್ ಪ್ರೀತ್ ಟ್ರೋಫಿ ಗೆದ್ದ ಬಳಿಕ ಮಾಡಿದ್ದೇನು

ಮುಂದಿನ ಸುದ್ದಿ
Show comments