ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಗುರುವಾರ ಚೆನ್ನೈನಲ್ಲಿ ತಮಿಳುನಾಡು ಪ್ರೀಮಿಯರ್ ಲೀಗ್(ಟಿಎನ್‌ಪಿಎಲ್)ಗೆ ಚಾಲನೆ ನೀಡಿದರು. ಮೂರು ವಾರಗಳ ಅವಧಿಯ ಪಂದ್ಯಾವಳಿಯಲ್ಲಿ 8 ತಂಡಗಳು ಆಡಲಿವೆ. ಕ್ರಿಕೆಟ್ ಪಂದ್ಯವನ್ನು ತಮಿಳುನಾಡಿನ ಜಿಲ್ಲೆಗಳಿಗೆ ತಂದು ಸ್ಥಳೀಯ ಪ್ರತಿಭೆಗಳನ್ನು ಶೋಧಿಸುವುದು ಟಿಎನ್‌ಪಿಎಲ್ ಸ್ಥಾಪನೆಯ ಮುಖ್ಯ ಉದ್ದೇಶ ಎಂದು ಹೊಸ ಲೀಗ್ ಕುರಿತು ಶ್ರೀನಿವಾಸನ್ ಹೇಳಿದರು. ಚೆನ್ನೈ, ನಾಥಮ್ ಮತ್ತು ತಿರುನೆಲ್ವೇಲಿ ಸೇರಿದಂತೆ ಮೂರು ಕೇಂದ್ರಗಳಲ್ಲಿ 27 ಪಂದ್ಯಗಳನ್ನು ಹೊಸ ಟ್ವೆಂಟಿ 20 ಲೀಗ್ ಆಡಿಸಲಿದೆ.
ಲೀಗ್ ವಿಜೇತರು 1 ಕೋಟಿ ರೂ. ಪ್ರಶಸ್ತಿ ಹಣಕ್ಕೆ ಪುರಸ್ಕೃತರಾಗಲಿದ್ದಾರೆ ಮತ್ತು ರನ್ನರ್ಸ್ ಅಪ್ 60 ಲಕ್ಷ ರೂ. ಹಣವನ್ನು ಗಳಿಸಲಿದ್ದಾರೆ. ಅಮಾನತಾದ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ 2018ಕ್ಕೆ ಪುನಃ ವಾಪಸಾಗಲಿದೆ ಎಂದು ಈ ಸಂದರ್ಭದಲ್ಲಿ ಶ್ರೀನಿವಾಸನ್ ಹೇಳಿದರು.
ಈ ವರ್ಷ ನಮ್ಮ ಐಪಿಎಲ್ ತಂಡ ಆಡಲಿಲ್ಲ. ಇನ್ನು ಒಂದು ಸೀಸನ್ ಬಾಕಿವುಳಿದಿದ್ದು ಅದಾದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಯಾವುದೇ ಅಡ್ಡಿ ಇಲ್ಲದೇ ಹಿಂತಿರುಗುತ್ತದೆ ಎಂದು ಶ್ರೀನಿವಾಸನ್ ಹೇಳಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.