Webdunia - Bharat's app for daily news and videos

Install App

T20 World Cup 2024: ಇಂದು ಗೆಲ್ಲದೇ ಇದ್ದರೆ ರೋಹಿತ್ ಶರ್ಮಾ ಬಾರ್ಬಡೋಸ್ ಸಮುದ್ರಕ್ಕೆ ಹಾರಬಹುದು ಎಂದ ಗಂಗೂಲಿ

Krishnaveni K
ಶನಿವಾರ, 29 ಜೂನ್ 2024 (11:06 IST)
ಬಾರ್ಬಡೋಸ್: ಇಂದು ನಡೆಯಲಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲದೇ ಇದ್ದರೆ ರೋಹಿತ್ ಶರ್ಮಾ ಬಾರ್ಬಡೋಸ್ ಸಮುದ್ರಕ್ಕೆ ಹಾರಬಹುದು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

ಇದು ರೋಹಿತ್ ಶರ್ಮಾಗೆ ಸತತ ಎರಡನೇ ಐಸಿಸಿ ವಿಶ್ವಕಪ್ ಟ್ರೋಫಿ ಫೈನಲ್ ಪಂದ್ಯವಾಗಿದೆ. ಎರಡನೇ ಬಾರಿಯೂ ವಿಶ್ವಕಪ್ ಫೈನಲ್ ಸೋತರೆ ಬೇಸರದಲ್ಲಿ ರೋಹಿತ್ ಶರ್ಮಾ ಬಾರ್ಬಡೋಸ್ ಸಮುದ್ರಕ್ಕೆ ಹಾರಬಹುದು ಎಂದು ಗಂಗೂಲಿ ತಮಾಷೆಯಾಗಿ ಹೇಳಿದ್ದಾರೆ.

ಈ ಮೂಲಕ ಭಾರತ ಇಂದು ಗೆದ್ದೇ ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಕಳೆದ 11 ವರ್ಷಗಳಿಂದ ಭಾರತ ಐಸಿಸಿ ಟ್ರೋಫಿ ಗೆದ್ದಿಲ್ಲ. ಆ ಬರ ಇಂದು ನೀಗಲಿದೆ ಎಂಬುದು ಕೋಟ್ಯಾಂತರ ಅಭಿಮಾನಿಗಳ ನಿರೀಕ್ಷೆಯಾಗಿದೆ. ಇದೇ ಭರವಸೆಯನ್ನು ಗಂಗೂಲಿಯೂ ವ್ಯಕ್ತಪಡಿಸಿದ್ದಾರೆ.

‘ಆರು ತಿಂಗಳ ಅವಧಿಯಲ್ಲಿ ಮತ್ತೊಂದು ವಿಶ್ವಕಪ್ ಫೈನಲ್ ನಲ್ಲಿ ರೋಹಿತ್ ಸೋಲು ಕಾಣಬಹುದು ಎಂದು ನನಗನಿಸುತ್ತಿಲ್ಲ. ತನ್ನ ನಾಯಕತ್ವದಲ್ಲಿ ಆರೇಳು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ವಿಶ್ವಕಪ್ ಫೈನಲ್ ಸೋತರೆ ರೋಹಿತ್ ಬಾರ್ಬಡೋಸ್ ಸಮುದ್ರಕ್ಕೆ ಹಾರಬಹುದು’ ಎಂದು ಗಂಗೂಲಿ ತಮಾಷೆ ಮಾಡಿದ್ದಾರೆ.

‘ರೋಹಿತ್ ನಾಯಕರಾಗಿ ತಾವೇ ಮುಂದೆ ನಿಂತು ತಂಡ ಮುನ್ನಡೆಸಿದ್ದಾರೆ. ತಾವೇ ಆಟವಾಡಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಭಾರತ ಇಂದು ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಅದಕ್ಕಾಗಿ ಅವರು ಒತ್ತಡವಿಲ್ಲದೇ ಆಡಬೇಕು. ಭಾರತ ಗೆಲ್ಲಲಿ ಎಂದು ನಾನು ಹಾರೈಸುತ್ತೇನೆ. ದೊಡ್ಡ ಟೂರ್ನಮೆಂಟ್ ಗೆಲ್ಲಲು ಅದೃಷ್ಟವೂ ಇರಬೇಕು. ರೋಹಿತ್ ಗೆ ಅದೃಷ್ಟವೂ ಸಾಥ್ ನೀಡಲಿ ಎಂದು ಹಾರೈಸುತ್ತೇನೆ’ ಎಂದು ಗಂಗೂಲಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments