Publish Date: Sun, 25 Oct 2026 (09:36 IST)
Updated Date: Sat, 24 Oct 2026 (20:55 IST)
ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ಮೈದಾನದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ನಿತೀಶ್ ರೆಡ್ಡಿ ವಿನ್ನಿಂಗ್ ಶಾಟ್ ಬಾರಿಸುತ್ತಿದ್ದಂತೆ, ಭದ್ರತಾ ಸಿಬ್ಬಂದಿ ಏಕಾಏಕಿ ಮೈದಾನಕ್ಕೆ ನುಗ್ಗಿ ನಿತೀಶ್ ರೆಡ್ಡಿ ಮತ್ತು ತಿಲಕ್ ವರ್ಮಾ ಅವರನ್ನು ಸುತ್ತುವರೆದಿದ್ದಾರೆ!
ಗೆಲ್ಲಲು ಅಸಾಧ್ಯವಾಗಿದ್ದ ಈ ಪಂದ್ಯವನ್ನು ತಿಲಕ್ ವರ್ಮ, ನಮನ್ ಧೀರ್, ನಿತೀಶ್ ಕುಮಾರ್ ರೆಡ್ಡಿ ಸಾಹಸಮಯವಾಗಿ ಗೆದ್ದಿದ್ದರು. ಭದ್ರತಾ ಸಿಬ್ಬಂದಿ ಎಷ್ಟು ವೇಗವಾಗಿ ಮೈದಾನಕ್ಕೆ ಆಗಮಿಸಿದರೆಂದರೆ, ಗೆಲುವಿನ ಸಂಭ್ರಮಾಚರಣೆ ಮಾಡಲು ತಿಲಕ್ ವರ್ಮಾ ಮತ್ತು ನಿತೀಶ್ ರೆಡ್ಡಿಗೆ ಕನಿಷ್ಠ ಸಮಯವೂ ಸಿಗಲಿಲ್ಲ. ತಕ್ಷಣವೇ ಇಬ್ಬರು ಆಟಗಾರರ ಸುತ್ತ ಭದ್ರತಾ ಕಾವಲು ಬಿಗಿಗೊಳಿಸಲಾಯಿತು.
ಭದ್ರತೆ ಕಾವಲು ಬಿಗಿಗೊಳಿಸಲು ಕಾರಣವೇನು?
ಇದಕ್ಕೂ ಮುಿನಿನ ಹಿಂದಿನ ಪಂದ್ಯದಲ್ಲಿ ಅಭಿಮಾನಿಯೊಬ್ಬ ಗೆಲುವಿನ ಕ್ಷಣದಲ್ಲಿ ಮೈದಾನಕ್ಕೆ ನುಗ್ಗಿದ್ದನು (Pitch Invader). ಈ ಹಿಂದಿನ ಘಟನೆಯಿಂದ ಎಚ್ಚೆತ್ತುಕೊಂಡಿರುವ ಭದ್ರತಾ ಸಿಬ್ಬಂದಿ, ಈ ಬಾರಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಎಚ್ಚರಿಕೆ ವಹಿಸಿರುವುದು ಈ ಘಟನೆಯಿಂದ ಸ್ಪಷ್ಟವಾಗಿದೆ. ಆಟಗಾರರ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಈ ರೀತಿಯ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ