Select Your Language

Notifications

webdunia
webdunia
webdunia
webdunia

ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಕ್ಕೆ ಸುರೇಶ್ ರೈನಾ ಅಲಭ್ಯ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಕ್ಕೆ ಸುರೇಶ್ ರೈನಾ ಅಲಭ್ಯ
ಮುಂಬೈ , ಗುರುವಾರ, 13 ಅಕ್ಟೋಬರ್ 2016 (16:53 IST)
ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಮೊದಲ ಏಕದಿನ ಸರಣಿಗೆ ಸುರೇಶ್ ರೈನಾ ಅಲಭ್ಯರಾಗಿದ್ದಾರೆ. ರೈನಾ ವೈರಲ್ ಜ್ವರದಿಂದ ಬಳಲುತ್ತಿರುವುದರಿಂದ ತಂಡದಲ್ಲಿ ಸ್ಥಾನ ಪಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
ನ್ಯೂಜಿಲೆಂಡ್ ಮತ್ತು ಭಾರತದ ವಿರುದ್ಧ ಐದು ಏಕದಿನ ಸರಣಿ ಪಂದ್ಯಗಳು ನೆಯಲಿದ್ದು, ಮೊದಲ ಪಂದ್ಯ ಅಕ್ಟೋಬರ್ 16 ರಂದು ನಡೆಯಲಿದೆ. ರೈನಾ ಅನುಪಸ್ಥಿತಿಯಲ್ಲಿ ಯಾರಿಗೆ ಸ್ಥಾನ ದೊರೆಯಲಿದೆ ಎನ್ನುವ ಬಗ್ಗೆ ಬಿಸಿಸಿಐ ಯಾವುದೇ ಹೇಳಿಕೆ ನೀಡಿಲ್ಲ.
 
ಕಳೆದ ಒಂದು ದಶಕದಿಂದ ಟೀಂ ಇಂಡಿಯಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮೆನ್ ಸ್ಥಾನವನ್ನು ತುಂಬಿರುವ ರೈನಾ, ಕೆಲ ಬಾರಿ ಫಾರ್ಮ್ ಕೊರತೆ ಎದುರಿಸುತ್ತಿರುವುದು ತಂಡದ ಆತಂಕಕ್ಕೆ ಕಾರಣವಾಗಿದೆ. 
 
ಸುರೇಶ್ ರೈನಾ ಇಲ್ಲಿಯವರೆಗೆ 223 ಏಕದಿನ ಪಂದ್ಯಗಳನ್ನಾಡಿದ್ದು ಸರಾಸರಿ 35.46 ಯಲ್ಲಿ 5568 ರನ್‌ಗಳನ್ನು ಪೇರಿಸಿದ್ದಾರೆ. ಅದರಲ್ಲಿ ಐದು ಶತಕಗಳು ಮತ್ತು 36 ಅರ್ಧಶತಕಗಳು ಸೇರಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಶಮಿ ಪುತ್ರಿ ಐಸಿಯುನಲ್ಲಿರುವ ಬಗ್ಗೆ ತಿಳಿದಿರಲಿಲ್ಲ: ಕೊಹ್ಲಿ