ಪ್ರಸಾರ ಭಾರತಿ ಜತೆಗೆ ಸಿಗ್ನಲ್‌ಗಳ ಹಂಚಿಕೆಯಲ್ಲಿ ಯಾವುದೇ ಜಾಹೀರಾತು ಇರಬಾರದು. ಸಿಗ್ನಲ್‌ಗಳಲ್ಲಿ ಜಾಹೀರಾತುಗಳನ್ನು ಸೇರ್ಪಡೆ ಮಾಡುವುದಾದರೆ ಆದಾಯವನ್ನು ಹಂಚಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸ್ಟಾರ್ ಸ್ಫೋರ್ಟ್ಸ್ ಇಂಡಿಯಾಗೆ ಶುಕ್ರವಾರ ಸೂಚಿಸಿದೆ. ಪ್ರಸಾರ ಭಾರತಿಗೆ ಲೈವ್ ಪ್ರಸಾರವನ್ನು ಯಾವುದೇ ಜಾಹೀರಾತಿಲ್ಲದೇ ಹಂಚಿಕೆ ಮಾಡಬೇಕೆಂಬ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸ್ಟಾರ್ ಸ್ಫೋರ್ಟ್ಸ್ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿತ್ತು.
ಸ್ಟಾರ್ ಸ್ಫೋರ್ಟ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಪ್ರಫುಲ್ಲಾ ಸಿ ಪಂತ್ ತಳ್ಳಿಹಾಕಿ ಮೇಲಿನ ತೀರ್ಪನ್ನು ನೀಡಿತು. ಯಾವುದೇ ಜಾಹೀರಾತಿಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಪ್ರಸಾರಕ್ಕೆ ಒತ್ತಾಯಿಸದಂತೆ ಪ್ರಸಾರ ಭಾರತಿಗೆ ಸೂಚಿಸುವಂತೆ ಕೋರಿ ಸ್ಟಾರ್ ಸ್ಫೋರ್ಟ್ಸ್ ಸುಪ್ರೀಂಕೋರ್ಟ್ ಮೆಟ್ಟಿಲು ಏರಿತ್ತು.
ಪ್ರಸಾರ ಭಾರತಿ ಈ ನೇರ ಪ್ರಸಾರದ ಪಂದ್ಯಗಳನ್ನು ಸಾಮಾನ್ಯಜನ ಸಮೂಹದ ಒಳಿತಿಗಾಗಿ ಪ್ರಸಾರ ಮಾಡುತ್ತದೆ. ಏಕೆಂದರೆ ಈ ಚಾನೆಲ್‌ಗಳಿಗೆ ಹಣ ಪಾವತಿ ಮಾಡುವಷ್ಟು ಸಾಮರ್ಥ್ಯ ಅವರಿಗಿರುವುದಿಲ್ಲ. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಇದನ್ನು ಪ್ರಸಾರ ಮಾಡಬೇಕು ಎಂದು ಕೋರ್ಟ್ ಪೀಠ ತಿಳಿಸಿತ್ತು.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.