Select Your Language

Notifications

webdunia
webdunia
webdunia
webdunia

ಲೋಧಾ ಸಮಿತಿಯ ಬಹುತೇಕ ಶಿಫಾರಸುಗಳಿಗೆ ಸುಪ್ರೀಂಕೋರ್ಟ್ ಅಸ್ತು

supreme court
ನವದೆಹಲಿ , ಸೋಮವಾರ, 18 ಜುಲೈ 2016 (16:23 IST)
ಮಾಜಿ ಮುಖ್ಯ ನ್ಯಾಯಮೂರ್ತಿ ಆರ್‌ಎಂ ಲೋಧಾ ನೇತೃತ್ವದ ಮೂವರು ಸದಸ್ಯರ ಸಮಿತಿ ಮಂಡಿಸಿದ ಶಿಫಾರಸುಗಳ ಪಟ್ಟಿಯಲ್ಲಿ ಸುಪ್ರೀಂಕೋರ್ಟ್ ಬಹುತೇಕ ಒಪ್ಪಿಕೊಂಡಿದೆ. ಒಪ್ಪಿಕೊಂಡ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಬಿಸಿಸಿಐ 6 ತಿಂಗಳ ಗಡುವನ್ನು ಕೂಡ ನೀಡಿದೆ. ಸುಪ್ರೀಂಕೋರ್ಟ್ ಸೋಮವಾರ ಬಿಸಿಸಿಐ ಆಡಳಿತದಲ್ಲಿ ಯಾವುದೇ ಸಚಿವರು ಇರಬಾರದೆಂಬ ಪ್ರಸ್ತಾವನೆಗೆ ಮತ್ತು ಮಂಡಳಿ ಸದಸ್ಯರಿಗೆ 70 ವರ್ಷದ ವಯೋಮಿತಿ ವಿಧಿಸಬೇಕೆಂಬ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದೆ.
 
ಬಿಸಿಸಿಐ ಮಾರ್ಚ್ ಆರಂಭದಲ್ಲಿ ಪ್ರಮಾಣಪತ್ರ ಸಲ್ಲಿಸಿ ಪಂದ್ಯಗಳ ನಡುವೆ ಜಾಹೀರಾತು ನೀಡುವುದು, ಅಧಿಕಾರಿಗಳ ವಯೋಮಿತಿ, ಅಧಿಕಾರಿ ತನ್ನ ಅವಧಿ ಮುಗಿಸಿದ ಬಳಿಕ ಮೂರು ವರ್ಷಗಳ ಕೂಲಿಂಗ್ ಆಫ್ ಪೀರಿಯಡ್ ಮತ್ತು ಒಂದು ರಾಜ್ಯ, ಒಂದು ಮತವನ್ನು ಕುರಿತ ಲೋಧಾ ಸಮಿತಿಯ ಶಿಫಾರಸುಗಳನ್ನು ವಿರೋಧಿಸಿತ್ತು.

ಆದರೆ ಪಂದ್ಯಗಳ ನೇರ ಪ್ರಸಾರದ ಸಂದರ್ಭದಲ್ಲಿ ಜಾಹೀರಾತುಗಳನ್ನು ನಿಷೇಧಿಸಬೇಕೆಂಬ ಶಿಫಾರಸನ್ನು ಹೊರತುಪಡಿಸಿ ಉಳಿದೆಲ್ಲಾ ಶಿಫಾರಸುಗಳಿಗೆ ಕೋರ್ಟ್ ಒಪ್ಪಿಗೆ ಸೂಚಿಸಿದೆ. ಜಾಹೀರಾತು ನಿಷೇಧದಿಂದ ಹಣಕಾಸು ರಚನೆ ಮೇಲೆ ತೀವ್ರ ಪೆಟ್ಟು ಬೀಳುತ್ತದೆ ಮತ್ತು ಪ್ರಸಾರಕರ ಹಿತಾಸಕ್ತಿಗೆ ಧಕ್ಕೆಯಾಗುತ್ತದೆಂದು ಬಿಸಿಸಿಐ ವಾದಿಸಿತ್ತು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕುಂಬ್ಳೆಯನ್ನು ಹೆಡ್ ಕೋಚ್ ಹುದ್ದೆಗೆ ನೇಮಿಸಿದ್ದಕ್ಕೆ ಕರ್ಟ್ನಿ ವಾಲ್ಷ್ ಶ್ಲಾಘನೆ