Publish Date: Tue, 05 Sep 2017 (11:02 IST)
Updated Date: Tue, 05 Sep 2017 (11:04 IST)
ಢಾಕಾ: ಬಾಂಗ್ಲಾದೇಶ ವಿರುದ್ಧ ಹೀನಾಯವಾಗಿ ಸೋತು ಅವಮಾನ ಅನುಭವಿಸಿದ ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಬಾಂಗ್ಲಾದೇಶದಲ್ಲಿ ಕಲ್ಲಿನೇಟು ಸಿಕ್ಕಿದೆ.
ಆಸಿಸ್ ಆಟಗಾರರು ತೆರಳುತ್ತಿದ್ದ ಬಸ್ ಗೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಘಟನೆಯ ನಂತರ ತಂಡಕ್ಕೆ ಒದಗಿಸಿದ್ದ ಭದ್ರತೆ ಹೆಚ್ಚಿಸಲಾಗಿದೆ.
ಸೋಮವಾರ ರಾತ್ರಿ ಮೈದಾನದಿಂದ ಹೋಟೆಲ್ ಗೆ ತೆರಳುತ್ತಿದ್ದಾಗ ಆಟಗಾರರಿದ್ದ ಬಸ್ ಗೆ ಕಿಡಿಗೇಡಿಗಳು ಕಲ್ಲು ಎಸೆದಿದ್ದು, ಬಸ್ ನ ಗಾಜು ಒಡೆದಿತ್ತು. ಆದರೆ ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿರಲಿಲ್ಲ. ಘಟನೆ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.