ಧರ್ಮಶಾಲಾದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ವೇಳೆ ಕ್ಯಾಚ್ ವಿಚಾರವಾಗಿ ಆಸ್ಟ್ರೇಲಿಯಾ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಮುರಳಿ ವಿಜಯ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವುದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
2ನೇ ಇನ್ನಿಂಗ್ಸ್`ನಲ್ಲಿ ಆಸೀಸ್ ಆಟಗಾರ ಜೋಶ್ ಹ್ಯಾಸನ್ವುಡ್ ಕೊಟ್ಟ ಕ್ಯಾಚನ್ನ ಮುರಳಿ ವಿಜಯ್ ಹಿಡಿದಿದ್ದರು. ಅಂಪೈರ್ ಸಹ ಔಟ್ ಎಂದು ತೀರ್ಪು ನೀಡಿದ್ದರು. ಆದರೆ, ರೀಪ್ಲೆಯಲ್ಲಿ ಬಾಲ್ ನೆಲಕ್ಕೆ ತಾಗಿದ್ದ ದೃಶ್ಯ ಸ್ಪಷ್ಟವಾಗಿತ್ತು. ಬಳಿಕ ತೀರ್ಪನ್ನ ಹಿಂಪಡೆಯಲಾಯ್ತು.
ಈ ಸಂದರ್ಭ ಡ್ರೆಸ್ಸಿಂಗ್ ಕೊಠಡಿ ಬಳಿ ಕುಳಿತಿದ್ದ ಆಸೀಸ್ ಕ್ಯಾಪ್ಟನ್ ಮೇಲೆದ್ದು ಅಶ್ಲೀಲ(F**** cheat)ಶಬ್ದ ಬಳಕೆ ಮಾಡಿದ್ದಾರೆ. ಈ ಮಾತನ್ನ ಸ್ಮಿತ್, ಮುರಳಿ ವಿಜಯ್ ಅವರನ್ನ ಕುರಿತೇ ಹೇಳಿರುವುದು ಸ್ಪಷ್ಟವಾಗಿದೆ. ಮೈದಾನದ ಕಡೆ ನೋಡುತ್ತಾ ಸ್ಮಿತ್ ಹರಿದಾಯ್ದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.