ಭಾರತ-ಲಂಕಾ ಏಕದಿನ: ಟೀಂ ಇಂಡಿಯಾ ದಾಳಿಗೆ ಕುಸಿದ ಲಂಕಾ

Webdunia
ಗುರುವಾರ, 12 ಜನವರಿ 2023 (16:53 IST)
Photo Courtesy: Twitter
ಕೋಲ್ಕೊತ್ತಾ: ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳ ಸಂಘಟಿತ ದಾಳಿಗೆ ತತ್ತರಿಸಿದ ಶ್ರೀಲಂಕಾ 39.4 ಓವರ್ ಗಳಲ್ಲಿ 215 ರನ್ ಗಳಿಗೆ ಆಲೌಟ್ ಆಗಿದೆ.

ಇಂದಿನ ಪಂದ್ಯದಲ್ಲಿ ಗಾಯಗೊಂಡ ಯಜುವೇಂದ್ರ ಚಾಹಲ್ ಸ್ಥಾನಕ್ಕೆ ಕುಲದೀಪ್ ಯಾದವ್ ತಂಡಕ್ಕೆ ಆಗಮಿಸಿದ್ದರು. ಈ ಬದಲಾವಣೆ ಭಾರತಕ್ಕೆ ವರವಾಯಿತು. ಕುಲದೀಪ್ ಯಾದವ್ ಲಂಕಾದ ಪ್ರಮುಖ ಮೂರು ವಿಕೆಟ್ ಕಬಳಿಸಿದರು. ಈ ನಡುವೆ ನುವಾನಿಂದ್ ಫರ್ನಾಂಡೋ 50 ಕುಸಾಲ್ ಮೆಂಡಿಸ್ 34, ದುನಿತ್ ವೆಲ್ಲಲಾಗೆ 32 ರನ್ ಗಳಿಸಿದರು.

ಭಾರತದ ಪರ ಮೊಹಮ್ಮದ್ ಸಿರಾಜ್ 3, ಉಮ್ರಾನ್ ಮಲಿಕ್ 2, ಅಕ್ಸರ್ ಪಟೇಲ್ 1 ವಿಕೆಟ್ ಕಬಳಿಸಿದರು. ಒಂದು ಹಂತದಲ್ಲಿ 1 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಲಂಕಾ ಮುಂದೆ 24 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಮಧ‍್ಯಮ ಕ್ರಮಾಂಕದಲ್ಲಿ ಭಾರತದ ಬೌಲರ್ ಗಳು ಎದುರಾಳಿಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ್ದರು. ಇದೀಗ ಭಾರತ ಗೆಲುವಿಗೆ 216 ರನ್ ಗಳಿಸಬೇಕಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ಯಾಪ್ಟನ್ ಜೊತೆ ಹೊಂದಾಣಿಕೆಯಾಗ್ತಿಲ್ಲ ಎಂದಾಕ್ಷಣ ಕೋಚ್ ಹುದ್ದೆ ಬಿಟ್ಟಿದ್ದ ಅನಿಲ್ ಕುಂಬ್ಳೆ: ಆದ್ರೆ ಗಂಭೀರ್...

ಗೌತಮ್ ಗಂಭೀರ್ ಹಾಯ್ ಹಾಯ್: ಸೋತ ಬೆನ್ನಲ್ಲೇ ಕೋಚ್ ಗೆ ಮೈದಾನದಲ್ಲೇ ಫ್ಯಾನ್ಸ್ ಮಂಗಳಾರತಿ Video

IND vs SA: ಗೌತಮ್ ಗಂಭೀರ್ ತೊಲಗಬೇಕು, ಇದು ಬಿಸಿಸಿಐಗೂ ತಲುಪಬೇಕು

ಬಾಸ್ಕೆಟ್ ಬಾಲ್ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಸಾವು, ಎದೆ ಝಲ್ಲೆನಿಸುತ್ತದೆ, Video

ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸಿದ ತೆಂಬಾ ಬವುಮಾ ಪಡೆ: ಗೌತಮ್‌ ಗಂಭೀರ್‌ಗೆ ಭಾರೀ ಮುಖಭಂಗ

ಮುಂದಿನ ಸುದ್ದಿ
Show comments