Publish Date: Sun, 19 Dec 2021 (09:45 IST)
Updated Date: Sun, 19 Dec 2021 (09:58 IST)
ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆಕ್ರಮಣಕಾರೀ ಮನೋಭಾವದ ಜೊತೆಗೆ ಅಷ್ಟೇ ಹಾಸ್ಯ ಪ್ರವೃತ್ತಿ ಇರುವವರೂ ಕೂಡಾ. ಇತ್ತೀಚೆಗೆ ಬಿಸಿಸಿಐ-ಕೊಹ್ಲಿ ನಡುವಿನ ತಿಕ್ಕಾಟದ ಬಗ್ಗೆಯೂ ಅವರು ಅಷ್ಟೇ ತಮಾಷೆ ಮನೋಭಾವದಲ್ಲಿ ಮಾತನಾಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಗಂಗೂಲಿ, ಕೊಹ್ಲಿ ಆಕ್ರಮಣಕಾರಿ ಮನೋಭಾವದ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿರುವ ಗಂಗೂಲಿ, ಕೊಹ್ಲಿ ಸ್ವಭಾವ ನನಗೆ ಇಷ್ಟ. ಆದರೆ ಒಂದು ವಿಚಾರಕ್ಕೆ ಅಗತ್ಯಕ್ಕಿಂತ ಹೆಚ್ಚು ಹೋರಾಟ ಮಾಡುತ್ತಾರೆ ಎಂದಿದ್ದಾರೆ.
ಇನ್ನು, ಒತ್ತಡಗಳನ್ನು ಹೇಗೆ ನಿಭಾಯಿಸುತ್ತೀರಿ ಎಂದು ಕೇಳಿದಾಗ, ಹೆಂಡತಿ ಮತ್ತು ಗರ್ಲ್ ಫ್ರೆಂಡ್ ಮಾತ್ರ ಟೆನ್ ಷನ್ ಕೊಡುವವರು. ಉಳಿದಿದ್ದನ್ನೆಲ್ಲಾ ನಿಭಾಯಿಸಬಹುದು ಎಂದು ತಮಾಷೆ ಮಾಡಿದ್ದಾರೆ.