Webdunia - Bharat's app for daily news and videos

Install App

ಶ್ರೇಯಸ್ ಅಯ್ಯರ್ ಶತಕ, ಇಶಾನ್ ಕಿಶನ್ ಅರ್ಧಶತಕ: ಗೆದ್ದ ಟೀಂ ಇಂಡಿಯಾ

Webdunia
ಭಾನುವಾರ, 9 ಅಕ್ಟೋಬರ್ 2022 (21:02 IST)
Photo Courtesy: Twitter
ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 7 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.

ಆಫ್ರಿಕಾ ನೀಡಿದ 279 ರನ್ ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಇಶಾನ್ ಕಿಶನ್ ಬಿರುಸಿನ ಅರ್ಧಶತಕ ಮತ್ತು ಶ್ರೇಯಸ್ ಅಯ್ಯರ್ ಶತಕ ನೆರವಾಯಿತು. ಇಶಾನ್ 84 ಎಸೆತಗಳಲ್ಲಿ 93 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ಆದರೆ ಅವರಿಗೆ ಸಾಥ್ ನೀಡುತ್ತಿದ್ದ ಶ್ರೇಯಸ್ ಅಯ್ಯರ್ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡು ಅಜೇಯ 113 ರನ್ ಗಳ ಇನಿಂಗ್ಸ್ ಆಡಿದರು. ಇದು ಅವರ ವೃತ್ತಿ ಜೀವನದ ಎರಡನೇ ಶತಕವಾಗಿತ್ತು.

ಕೊನೆಯಲ್ಲಿ ಬಂದ ಸಂಜು ಸ್ಯಾಮ್ಸನ್ ಅಜೇಯ 30 ರನ್ ಗಳ ಕೊಡುಗೆ ನೀಡಿ ತಂಡದ ಗೆಲುವಿಗೆ ಕಾರಣರಾದರು. ಇದಕ್ಕೆ ಮೊದಲು ಶಿಖರ್ ಧವನ್ 13, ಶುಬ್ನಂ ಗಿಲ್ 28 ರನ್ ಗಳಿಸಿ ಔಟಾಗಿದ್ದರು. ಅಂತಿಮವಾಗಿ ಭಾರತ 45.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತು.

-Edited by Rajesh Patil

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli: ವಿರಾಟ್ ಕೊಹ್ಲಿ ಕಟೌಟ್ ಮುಂದೆ ಕುರಿ ಕಡಿದ ಫ್ಯಾನ್ಸ್ ಅರೆಸ್ಟ್

Rohit Sharma: ರೋಹಿತ್ ಶರ್ಮಾ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಟೀಂ ಇಂಡಿಯಾ ಹಿರಿಯ ಆಟಗಾರ

Mohammed Siraj: ಮೊಹಮ್ಮದ್ ಸಿರಾಜ್ ಗೆ ವಜ್ರದ ಉಂಗುರ ಗಿಫ್ಟ್ ಮಾಡಿದ ರೋಹಿತ್ ಶರ್ಮಾ

IPL 2025: ಔಟ್ ಮಾಡೋ.. ಕಾವ್ಯಾ ಮಾರನ್ ಎಕ್ಸ್ ಪ್ರೆಷನ್ ಗೆಂದೇ ಕ್ಯಾಮರಾ ಇಡ್ಬೇಕು: ವಿಡಿಯೋ

DC vs SRH match: ಬೇಕಿದ್ದಾಗ ಯಾವತ್ತೂ ಆಡಲ್ಲ, ಟ್ರೋಲ್ ಆದ ಕೆಎಲ್ ರಾಹುಲ್

ಮುಂದಿನ ಸುದ್ದಿ
Show comments