Publish Date: Wed, 26 Jul 2017 (20:17 IST)
Updated Date: Wed, 26 Jul 2017 (20:24 IST)
ಟೀಮ್ ಇಂಡಿಯಾ ಟೆಸ್ಟ್ ತಂಡದಿಂದ ಕೈಬಿಟ್ಟಿದ್ದು, ನನಗೆ ತುಂಬಾ ನೋವುಂಟು ಮಾಡಿತ್ತು. ಆದರೆ, ಟೆಸ್ಟ್ ತಂಡಕ್ಕೆ ಕಮ್ ಬ್ಯಾಕ್ ಮಾಡುವ ಆತ್ಮವಿಶ್ವಾಸ ನನ್ನಲ್ಲಿತ್ತು ಎಂದು ಶತಕವೀರ ಶಿಖರ್ ಧವನ್ ಹೇಳಿದ್ದಾರೆ.
ದಿನದಾಟದ ಬಳಿಕ ಮಾತನಾಡಿದ ಶಿಖರ್ ಧವನ್, ನಾನು ಸ್ಕೋರ್ ಮಾಡದಿದ್ದರೆ ತಂಡದಿಂದ ಹೊರ ಹಾಕುತ್ತಾರೆ ಎಂಬ ಒತ್ತಡ ನನ್ನಲ್ಲಿತ್ತು. ಈ ಹಿಂದೆ ಟೆಸ್ಟ್ ತಂಡದಿಂದ ಕೈಬಿಟ್ಟಿದ್ದು, ನನಗೆ ಅತೀವ ನೋವನ್ನ ತಂದಿತ್ತು ಎಂದು ಹೇಳಿದ್ಧಾರೆ.
ಬಳಿಕ ನಾನು ದೆಹಲಿ ತಂಡದ ಪರ ದೇಶೀಯ ಸರಣಿಯಲ್ಲಿ ಆಡುವತ್ತ ಗಮನ ಹರಿಸಿದೆ. ನನ್ನ ಆಟವನ್ನ ನಾನು ತುಂಬಾ ಎಂಜಾಯ್ ಮಾಡಿದೆ. ನಾನು ಯಾವಾಗಲೂ ದುಃಖದಿಂದಿರಲು ಇಷ್ಟಪಡುವುದಿಲ್ಲ. ನಾನು ಯಾವಾಗಲೂ ಖುಷಿಯಾಗಿ ಆಡಲು ಇಷ್ಟಪಡುತ್ತೇನೆ. ನನ್ನ ಕೆಲಸ, ಕೌಶಲ್ಯ, ಫಿಟ್ನೆಸ್`ನತ್ತ ಹೆಚ್ಚು ಗಮನ ಹರಿಸುತ್ತೇನೆ ಎಂದು ಶಿಖರ್ ಧವನ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ