Publish Date: Tue, 08 Mar 2022 (16:29 IST)
Updated Date: Tue, 08 Mar 2022 (16:31 IST)
ಸಿಡ್ನಿ: ಕ್ರಿಕೆಟಿಗ ಶೇನ್ ವಾರ್ನ್ ಹೃದಯಾಘಾತದಿಂದಾಗಿ ಅಕಾಲಿಕವಾಗಿ ಸಾವನ್ನಪ್ಪಿರುವುದು ಎಲ್ಲರನ್ನೂ ದಿಗ್ಬ್ರಮೆಗೊಳಗಾಗಿಸಿದೆ. ಈಗ ಶೇನ್ ಸಾವಿಗೆ ಕಾರಣವೇನೆಂಬುದರ ಬಗ್ಗೆ ವಿಶ್ಲೇಷಣೆಗಳು ನಡೆಯುತ್ತಿವೆ.
ಕೆಲವು ದಿನಗಳ ಹಿಂದೆ ಶೇನ್ ವಾರ್ನ್ ಸ್ಟ್ರಿಕ್ ಡಯಟ್ ಮಾಡಿದ್ದರು. ತೂಕ ಇಳಿಸಿಕೊಳ್ಳಲು 14 ದಿನಗಳ ಕಾಲ ಕಟ್ಟುನಿಟ್ಟಾಗಿ ಕೇವಲ ಪಾನೀಯ ಮಾತ್ರ ಸೇವಿಸುತ್ತಾ ಡಯಟ್ ಮಾಡಿದ್ದರು.
ಬಹುಶಃ ಈ ರೀತಿಯ ಕಟ್ಟುನಿಟ್ಟಿನ ಡಯಟ್ಟೇ ಅವರ ಜೀವಕ್ಕೆ ಕುತ್ತಾಯಿತೇ ಎಂಬ ಅನುಮಾನಗಳು ಮೂಡಿವೆ. ಇದೇ ರೀತಿ ಅವರು ಇದಕ್ಕೂ ಮೊದಲೂ ಎರಡು ಮೂರು ಬಾರಿ ಮಾಡಿದ್ದರಂತೆ. ಬಹುಶಃ ಈ ರೀತಿಯ ಅತಿಯಾದ ಡಯಟ್ ಆರೋಗ್ಯಕ್ಕೆ ಕುತ್ತಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.