Publish Date: Sun, 20 Mar 2022 (16:50 IST)
Updated Date: Sun, 20 Mar 2022 (16:52 IST)
ಮೆಲ್ಬೋರ್ನ್: ಕೆಲವು ದಿನಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದ ಆಸ್ಟ್ರೇಲಿಯಾ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಗೆ ಅಂತಿಮ ವಿದಾಯ ಕಾರ್ಯಕ್ರಮ ಏರ್ಪಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶೇನ್ ವಾರ್ನ್ ತಂದೆ-ತಾಯಿ, ಮೂವರು ಮಕ್ಕಳು, ಮಾಜಿ ಕ್ರಿಕೆಟಿಗರಾದ ಆಂಡ್ರ್ಯೂ ಸೈಮಂಡ್ಸ್, ಮೈಕಲ್ ವಾನ್, ಮಾರ್ಕ್ ಟೇಲರ್, ಅಲನ್ ಬಾರ್ಡರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಥೈಲ್ಯಾಂಡ್ ನಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದ್ದ ಶೇನ್ ಮೃತದೇಹವನ್ನು ತವರು ಮೆಲ್ಬೋರ್ನ್ ಗೆ ಕರೆತರಲಾಗಿದ್ದು, ಇಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಕ್ರಿಯೆ ನಡೆಯಲಿದೆ. ಈ ಕಾರ್ಯಕ್ರಮ ಮಾರ್ಚ್ 30 ರಂದು ನಡೆಯಲಿದ್ದು, ಸಾರ್ವಜನಿಕರೂ ಭಾಗಿಯಾಗಲಿದ್ದಾರೆ.