Webdunia - Bharat's app for daily news and videos

Install App

ಪಾಕಿಸ್ತಾನಕ್ಕೆ ಬನ್ನಿ, ಭಾರತವನ್ನೂ ಮರೆಯುತ್ತೀರಿ: ವಿರಾಟ್ ಕೊಹ್ಲಿಗೆ ಶಾಹಿದ್ ಅಫ್ರಿದಿ ಆಹ್ವಾನ

Krishnaveni K
ಶುಕ್ರವಾರ, 12 ಜುಲೈ 2024 (16:07 IST)
ಕರಾಚಿ: 2025 ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಪಾಕಿಸ್ತಾನಕ್ಕೆ ಹೋಗಲು ಹಿಂದೇಟು ಹಾಕುತ್ತಿರುವ ಟೀಂ ಇಂಡಿಯಾಕ್ಕೆ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ವಿಶೇಷ ಆಹ್ವಾನ ನೀಡಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿಯನ್ನು ವಿಶೇಷವಾಗಿ ಆಹ್ವಾನಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿ 2025 ಪಾಕಿಸ್ತಾನದ ಆತಿಥ್ಯದಲ್ಲಿ ಪಾಕಿಸ್ತಾನದಲ್ಲೇ ನಡೆಯುತ್ತಿದೆ. ಆದರೆ ಪಾಕಿಸ್ತಾನಕ್ಕೆ ಟೀಂ ಇಂಡಿಯಾ ಕಳುಹಿಸಲು ಬಿಸಿಸಿಐ ಹಿಂದೇಟು ಹಾಕುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಸಿಗುವುದೂ ಕಷ್ಟ. ಇದರ ನಡುವೆ ಶಾಹಿದ್ ಅಫ್ರಿದಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದ್ದಾರೆ.

‘ನಾನು ಭಾರತ ತಂಡವನ್ನು ಪಾಕಿಸ್ತಾನಕ್ಕೆ ಆಹ್ವಾನಿಸುತ್ತಿದ್ದೇನೆ. ಪಾಕಿಸ್ತಾನ ಭಾರತಕ್ಕೆ ಹೋಗಿದ್ದಾಗ ನಮಗೆ ಸಾಕಷ್ಟು ಗೌರವ ಸಿಕ್ಕಿತ್ತು. 2005 ರಲ್ಲಿ ಭಾರತಕ್ಕೆ ಹೋಗಿದ್ದಾಗ ಸಾಕಷ್ಟು ಜನರ ಪ್ರೀತಿ ನಮಗೆ ಸಿಕ್ಕಿತ್ತು. ಕ್ರೀಡೆ ರಾಜಕೀಯದ ಹೊರತಾಗಿರಬೇಕು. ಎರಡೂ ತಂಡಗಳು ಆಡದೇ ಇರಲು ರಾಜಕೀಯವೇ ಕಾರಣ. ಭಾರತ ತಂಡ ಪಾಕಿಸ್ತಾನಕ್ಕೆ ಬರುವುದು, ಪಾಕಿಸ್ತಾನ ತಂಡ ಭಾರತಕ್ಕೆ ಹೋಗುವುದಕ್ಕಿಂತ ಸುಂದರ ಕ್ಷಣ ಇನ್ನೇನಿದೆ’ ಎಂದಿದ್ದಾರೆ.

ಅಷ್ಟೇ ಅಲ್ಲದೆ, ವಿರಾಟ್ ಕೊಹ್ಲಿಗೆ ಪಾಕಿಸ್ತಾನದಲ್ಲಿ ಸಿಗಬಹುದಾದ ಪ್ರೀತಿ ಬಗ್ಗೆ ವಿಶೇಷವಾಗಿ ಹೇಳಿಕೊಂಡಿದ್ದಾರೆ. ‘ಪಾಕಿಸ್ತಾನಕ್ಕೆ ಬಂದರೆ ವಿರಾಟ್ ಕೊಹ್ಲಿಗೆ ಭಾರತದಲ್ಲಿ ತನ್ನನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದೂ ಮರೆತು ಹೋಗಬಹುದು. ಅಷ್ಟರ ಮಟ್ಟಿಗೆ ಇಲ್ಲಿಯ ಜನ ಅವರನ್ನು ಪ್ರೀತಿಸುತ್ತಾರೆ. ಆತ ನನ್ನ ಫೇವರಿಟ್ ಕ್ರಿಕೆಟಿಗ. ಆತ ಟಿ20 ಕ್ರಿಕೆಟ್ ನಿಂದ ನಿವೃತ್ತಿಯಾಗಬಾರದಿತ್ತು’ ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Shubman Gill: ಹಾರ್ದಿಕ್ ಪಾಂಡ್ಯ ಜೊತೆ ಮುನಿಸು, ಎಲ್ಲವನ್ನೂ ಬಿಚ್ಚಿಟ್ಟ ಶುಬ್ಮನ್ ಗಿಲ್, ಫ್ಯಾನ್ಸ್ ಶಾಕ್

Shahid Afridi: ಶಾಹಿದ್ ಅಫ್ರಿದಿಯನ್ನು ಕರೆಸಿ ಸನ್ಮಾನ ಮಾಡಿದ ದುಬೈ ಕೇರಳಿಗರು: ಪಹಲ್ಗಾಮ್ ದಾಳಿ ಮರೆತ್ರಾ

IPL 2025: ಮೂರು ಐಪಿಎಲ್ ಫೈನಲ್ ಗಳಲ್ಲಿ ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು ಇಲ್ಲಿದೆ ವಿವರ

IPL 2025: ನಮ್ಗೆ ಫೈನಲ್ ನಲ್ಲಿ ಆರ್ ಸಿಬಿ ವರ್ಸಸ್ ಮುಂಬೈ ಬೇಕೇ ಬೇಕು

IPL 2025: ಎರಡು ಜೀವದಾನದ ಲಾಭ ಪಡೆದು ಮುಂಬೈ ತಂಡವನ್ನು ಕ್ವಾಲಿಫೈಯರ್‌ಗೆ ಕೊಂಡೊಯ್ದ ರೋಹಿತ್‌ ಶರ್ಮಾ

ಮುಂದಿನ ಸುದ್ದಿ
Show comments